
ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದಲ್ಲಿ ಕಳೆದ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ತಾಲ್ಲೂಕಿನ ಸಾವಿರಾರು ಜನ ರೈತರು ತಾವು ಬೆವರು ಹರಿಸಿ ಕಷ್ಟ ಪಟ್ಟು ಮುಂಗಾರು ಭತ್ತದ ಬೆಳೆಯನ್ನು ಬೆಳೆದಿದ್ದರು.
ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಬೈಚಬಾಳ-ಕೂಡಲಗಿ ಹಾಗೂ ಕರಡಕಲ್ ಗ್ರಾಮದ 43 ಜನ ರೈತರು ಸುಮಾರು 1,49,00,000 ಕೋಟಿ ಮೌಲ್ಯದ ಭತ್ತವನ್ನು ಆಂಧ್ರ ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು.
ಇನ್ನೇನು ನಾಳೆ ಹಣ ಕೊಡ್ತಾರೆ, ನಾಡಿದ್ದು ಹಣ ಕೊಡ್ತಾರೆ ಅನ್ನುವಷ್ಟರಲ್ಲಿ ಆ ವ್ಯಕ್ತಿ ತನ್ನ ಮೋಬೈಲ್ ಸ್ವಿಚ್ ಆಫ್ ಮಾಡಿಕೊಂಡು ರೈತರಿಗೆ ಪಂಗನಾಮ ಹಾಕಿ ಪರಾರಿಯಾಗಿದ್ದ. ಇದರಿಂದಾಗಿ ದಾರಿ ತೋಚದ ಸಮಯದಲ್ಲಿ ನೊಂದ ರೈತರೆಲ್ಲರೂ ಸೇರಿ ಪೋಲಿಸ್ ಠಾಣೆ ಸೇರಿದಂತೆ ವಿವಿಧ ಕಛೇರಿಗಳಿಗೆ ಸುತ್ತಾಡಿ ರೋಸಿ ಹೋಗಿದ್ದರು.
ನಂತರ ಸುದ್ದಿ ತಿಳಿದ ಸುರಪುರ ಮಾಜಿ ಶಾಸಕ ನರಸಿಂಹನಾಯಕ (ರಾಜೂಗೌಡ) ರು ಎಲ್ಲಾ ನೊಂದ ರೈತರೊಂದಿಗೆ ಕೆಂಭಾವಿ ಪೋಲಿಸ್ ಠಾಣೆಗೆ ತೆರಳಿ ಅಧಿಕಾರಿಗಳಿಗೆ ಒತ್ತಡ ಹೇರುವ ಮೂಲಕ ಎಫ್ ಐ ಆರ್ ದಾಖಲಿಸಿದರು.
ನಂತರ ಕಾರ್ಯಪ್ರವೃತ್ತರಾದ ಕೆಂಭಾವಿ ಪೋಲಿಸ್ ಠಾಣೆಯ ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸಿ ಕರೆ ತಂದರು.
ಸಧ್ಯ ಭತ್ತ ಖರೀದಿಸಿ ರೈತರಿಗೆ ಮೋಸ ಮಾಡಿ 5-6 ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ದಲ್ಲಾಳಿಯಿಂದ ಸುಮಾರು 71,00,000 ಲಕ್ಷ ಹಣವನ್ನು 43 ಜನ ನೊಂದ ರೈತರಿಗೆ ತಲುಪಿಸುವಲ್ಲಿ ರಾಜೂಗೌಡರು ಯಶಸ್ವಿಯಾಗಿದ್ದಾರೆ.
ಬೈಚಬಾಳ ಗ್ರಾಮಕ್ಕೆ ತೆರಳಿ ಆರಾಧ್ಯ ದೈವ ಶ್ರೀ ಬಲಭೀಮೇಶ್ವರ ನಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಸನ್ನಿಧಾನದಲ್ಲಿ ಸ್ವತಃ ರಾಜೂಗೌಡರೆ ಎಲ್ಲಾ ಹಣವನ್ನು ಎಣಿಸಿ ರೈತರಿಗೆ ವಿತರಿಸಿದರು.
” ದೇಶದ ಬೆನ್ನೆಲುಬು ಆ ರೈತರಿಗೆ ಮೋಸ ಮಾಡಿದ್ರೆ ಒಳ್ಳೆಯದಾಗುವುದಿಲ್ಲ, ಸಧ್ಯ 43 ಜನ ರೈತರಿಗೆ 71 ಲಕ್ಷ ಹಣವನ್ನು ಪ್ರಾಮಾಣಿಕವಾಗಿ ತಲುಪಿಸಿದ್ದೇವೆ, ಇನ್ನುಳಿದ 78 ಲಕ್ಷ ಹಣವನ್ನು ಆಂದ್ರ ಮೂಲದ ವ್ಯಕ್ತಿಯ ಆಸ್ತಿ ಮುಟ್ಟುಗೋಲು ಮಾಡಿಕೊಂಡು ನೊಂದ ರೈತರಿಗೆ ನೀಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ಗೌಡ ದರ್ಶನಾಪುರ ರವರಿಗೆ ಕೆಂಭಾವಿ ಪಿಎಸ್ಐ ಹಾಗೂ ಹಗಲಿರುಳು ಶ್ರಮಿಸಿದ ಎಲ್ಲ ಕಾಣದ ಕೈಗಳಿಗೂ ಧನ್ಯವಾದಗಳು “.
- ನರಸಿಂಹ ನಾಯಕ (ರಾಜೂಗೌಡ) ಮಾಜಿ ಶಾಸಕರು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರು.
” ಪಕ್ಷಭೇಧ ಮರೆತು ಮಾಜಿ ಶಾಸಕ ರಾಜೂಗೌಡರು ತಮ್ಮ ಪ್ರಾಮಾಣಿಕ ಪ್ರಯತ್ನದಿಂದ ನಮಗೆ ಹಣ ತಲುಪಿಸಿ ನ್ಯಾಯ ಕೊಡಿಸುವಲ್ಲಿ ನೆರವಾಗಿದ್ದಾರೆ ನಮ್ಮ ಗ್ರಾಮದ ಎಲ್ಲಾ ರೈತರು ರಾಜೂಗೌಡರಿಗೆ ಅಭಾರಿಯಾಗಿದ್ದೇವೆ “.
- ಬಂದೇನವಾಜ್ ದೊಡ್ಮನಿ
ನೊಂದ ರೈತ ಬೈಚಬಾಳ.
ಈ ಸಂದರ್ಭದಲ್ಲಿ ಯಲ್ಲಪ್ಪ ಕುರಕುಂದಿ, ಕೃಷ್ಣಾರೆಡ್ಡಿ ಮುದನೂರ, ಪ್ರವೀಣ್ ನಾಯಕ್ ಡೊಣ್ಣೆಗೆರೆ, ಅಂಬ್ರೆಶ್ ನಾಯಕ ಡೊಣ್ಣೆಗೆರೆ, ಶಂಕರ ಗೌಡ ಸಾದ್ಯಾಪುರ, ನಿಂಗಣ್ಣ ಗೋಡಿಹಾಳ್ಕರ್, ಮಡಿವಾಳಪ್ಪ ಕೊಂಡಗುಳಿ, ಬಸವರಾಜ ನಾಯಕ ಕನ್ನೆಳ್ಳಿ, ಭೀಮನಗೌಡ ಪೋಲಿಸ್ ಪಾಟೀಲ, ಮಲ್ಲು ಚಾನಕೋಟಿ, ವೆಂಕನಗೌಡ ಪೊಲೀಸ್ ಪಾಟೀಲ್,ಶರಣಗೌಡ ಪಾಟೀಲ,ಭೀಮಣ್ಣ ಶೆಟ್ಟಿ, ಯಂಕೋಬಗೌಡ ಬಿರಾದಾರ ,ಪರಮಣ್ಣ ಯನಗುಂಟಿ, ಶಾಂತಪ್ಪ ಐಕೂರ್, ಮಲ್ಲನಗೌಡ ಬಿರಾದಾರ, ಯಂಕೋಬ ದೊರೆ, ಭೀಮಣ್ಣ ದೊರೆ, ನಿಂಗಪ್ಪ ಬಿಂಗಿ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ ಪತ್ರಿಕೆ




















