ಚಿತ್ರದುರ್ಗ : ಕೋಟೆ ನಗರ ಚಿತ್ರದುರ್ಗಲ್ಲಿ ಮೇ 9 ರಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಶಿಕಾರಿಪುರ ಕ್ಷೇತ್ರದ ಧೀಮಂತ ನಾಯಕರಾದ, (ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ) ಬಿ,ಎಸ್ ಯಡಿಯೂರಪ್ಪ ನವರ ರಾಜಕೀಯ 50ರ ವಸಂತದ ಹಿನ್ನೆಲೆಯಲ್ಲಿ ಅಭಿಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದು ರಾಜಕೀಯೇತರ ಕಾರ್ಯಕ್ರಮವಾಗಿದ್ದು ಸುಮಾರು ಐದರಿಂದ ಎಂಟು ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ.




















