ಕೊಪ್ಪಳ/ ಯಲಬುರ್ಗಾ: ಮಲಕಸಮುದ್ರ ಕೆರೆಯ ಹತ್ತಿರ ಇರುವ ಹಾಗೂ ಯಲಬುರ್ಗಾ ಸೀಮಾದ ರೈತರು ತಮ್ಮ ಹೊಲಗಳಿಗೆ ಹೋಗಿ ಬಿತ್ತನೆ ಮಾಡಬೇಕಾದರೆ ಕಷ್ಟ ಅನುಭವಿಸುತ್ತಿದ್ದಾರೆ ಆದ್ದರಿಂದ ರೈತರಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ವಾಸುದೇವ ಬಣದ) ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಒತ್ತಾಯಿಸಿದ್ದಾರೆ.
ಯಲಬುರ್ಗಾದ ಗಣೇಶ ದೇವಸ್ಥಾನದಿಂದ ಮಲಕಸಮುದ್ರ ಕೆರೆಯವರೆಗೆ ಇರುವ ರಸ್ತೆಯನ್ನು ಸರಿಪಡಿಸಬೇಕು ,ಮಲಕ ಸಮುದ್ರ ಕೆರೆಯ ಪಕ್ಕದಲ್ಲಿರು ರಸ್ತೆಯಲ್ಲಿ ಹಾಪು ಹಾಗೂ ಮುಳ್ಳು ಕಂಠಿಗಳು ಬೆಳೆದು ದಾರಿ ಇಲ್ಲದೆ ರೈತರು ಪರದಾಡುತ್ತಿದ್ದಾರೆ, ಸರ್ವೆ ನಂಬರ್ 255 ರ ಮುಂದಿನ ಹೊಲಗಳಿಗೆ ಹೋಗುವ ರೈತರಿಗೆ ದಾರಿಯಿಲ್ಲದೆ ರೈತರು ಜಗಳವಾಡುತ್ತಾ ಇದ್ದಾರೆ ,ಈ ಮಾರ್ಗವಾಗಿ ರಸ್ತೆ ಇರಲಾರದೆ ಬೇಸರ ಪಟ್ಟು 10 ವರ್ಷದಿಂದ ರೈತರು ಪಾಳು ಬಿದ್ದಿರುವ ತಮ್ಮ ಜಮೀನುಗಳಿಗೆ ಹೋಗಿ ಮುಳ್ಳು ಕಂಠಿ ಸ್ವಚ್ಚಗೊಳಿಸಿ ಬಿತ್ತನೆಗೆ ಹದಗೊಳಿಸಬೇಕಾದರೆ ಈಗ ಎರಡು ಎಕರೆ ಹೊಲಕ್ಕೆ ಒಂದು ಲಕ್ಷ ಅಧಿಕವಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ, ಇದರಿಂದ ರೈತರ ಬದುಕು ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಸುಗಮ ರಸ್ತೆ ಸಂಪರ್ಕ ಕಲ್ಲಿಸಲು ನಮ್ಮ ಹೊಲ ನಮ್ಮ ದಾರಿ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆಯಡಿ ತೊಂದರೆಗೆ ಒಳಗಾದ ರೈತರ ಜಮೀನುಗಳಿಗೆ ಸುಗಮ ರಸ್ತೆ ಸಂಪರ್ಕ ಕಲ್ಪಿಸಲು ಮುಂದಾದರೆ , ಈ ಯೋಜನೆಯ ಸದುಪಯೋಗ ರೈತರಿಗೆ ದೊರೆತಾಗ ಮಾತ್ರ ಇಂತಹ ಯೋಜನೆಗಳಿಗೆ ಅರ್ಥಬರುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಯಲಬುರ್ಗಾ ತಾಲೂಕು ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಸಂಬಂಧಿಸಿದಿಸಿದ ಅಧಿಕಾರಿಗಳು ,ಜನಪ್ರತಿನಿಧಿಗಳಲ್ಲಿ ಒತ್ತಾಯಿಸಿದ್ದಾರೆ. ಒಂದು ವೇಳೆ ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಮಾನದಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















