
ಹುನಗುಂದ: ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ದಿನಾಂಕ 10 ರಂದು ಶುಕ್ರವಾರ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜಯಂತೋತ್ಸವ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಜರುಗಿದವು.
ಜಯಂತೋತ್ಸವದ ನಿಮಿತ್ಯ ಮುಂಜಾನೆ ಮಲ್ಲಮ್ಮನ ಮೂರ್ತಿಗೆ ಅಮರಯ್ಯ ಹಿರೇಮಠ ವೀರೇಶ್ ಸರಗಣಚಾರಿ ಮುದುಕಯ್ಯ ಬಸಯ್ಯ ಹಿರೇಮಠ ವೀರಯ್ಯ ಶರಣಯ್ಯ ಹಿರೇಮಠ ಪುಟ್ಟರಾಜ್ ಶರಣಯ್ಯ ಹಿರೇಮಠ ರುದ್ರಾಭಿಷೇಕವನ್ನು ನೆರವೇರಿಸಿದರು. ನಂತರ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಕಳಸವನ್ನು ಗ್ರಾಮಸ್ಥರು ವಾದ್ಯ ಮೇಳದೊಂದಿಗೆ ವಿಶ್ವನಾಥ ಚನ್ನಪ್ಪ ಗೌಡ ಹನುಮಗೌಡರ ತೆರಳಿ ಅವರ ಮನೆಯಿಂದ ದೇವಸ್ಥಾನಕ್ಕೆ ತಂದು ಶಿಖರಕ್ಕೆ ಏರಿಸಲಾಯಿತು.
ಮಧ್ಯಾಹ್ನ ಜಂಗಮ ಪ್ರಸಾದ ನಂತರ ಅನ್ನ ಸಂತರ್ಪಣೆ ಜರುಗಿತು.
ಭಾವಚಿತ್ರ ಮೆರವಣಿಗೆ: ಅಂದು ಸಾಯಂಕಾಲ ಮಲ್ಲಮ್ಮಳ ಭಾವಚಿತ್ರದ ಮೆರವಣಿಗೆಯನ್ನು ದೇವಸ್ಥಾನದಲ್ಲಿ ವೀರಯ್ಯ ಶರಣಯ್ಯ ಹಿರೇಮಠ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭಗೊಂಡು ಮಹಿಳೆಯರು ಕಳಸ ಕನ್ನಡಿ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜಿ ಸಲ್ಲಿಸಿದರು.
ಮೆರವಣಿಗೆಯಲ್ಲಿ ಗ್ರಾಮದ ಹಿರಿಯರು ಯುವಕರು ಮಹಿಳೆಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.
- ಕರುನಾಡ ಕಂದ ಪತ್ರಿಕೆ



















