ತುಮಕೂರು ನಗರದಲ್ಲಿ ಈದಿನ ಕಾಂಗ್ರೆಸ್ ಸರ್ಕಾರದ ಸಾಧನೆಯ ಸೇವೆಯ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಾಸಕಿ ಯಾದ ಲಕ್ಷೀ ಹೆಬ್ಬಾಳ್ಕರ್ ಅವರು ಸರ್ಕಾರದ ಯೋಜನೆಗಳಾದ ಅನ್ನಭಾಗ್ಯ ಯೋಜನೆ ,ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ ,ಗೃಹಜ್ಯೋತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಾಗೂ ಅಂಗನವಾಡಿ ಮತ್ತು ಸಹಾಯಕಿಯರ ನೇಮಕಾತಿ ಮತ್ತು ಸರ್ಕಾರದ ಆಡಳಿತದ ಬಗ್ಗೆ ಮಾತನಾಡಿದರು ಹಾಗೂ ಕಂದಾಯ ಸಚಿವರಾದ ಕೃಷ್ಣ ಬೋರೇಗೌಡ ಕಂದಾಯ ಇಲಾಖೆಯ ಆಡಳಿತದ ವಿಷಯಗಳನ್ನು ತಿಳಿಸಿದರು. ಜಮೀರ್ ಅಹಮದ್ ಖಾನ್ಅವರು ವಸತಿ ಇಲಾಖೆಯ ಮನೆಯ ವಿಚಾರ ಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಟಿ ಬಿ ಜಯಚಂದ್ರ ಚಿಕ್ಕಬಳ್ಳಾಪುರ ಸಚಿವರು ಪ್ರದೀಪ್ ಈಶ್ವರ್ ,ಶಾಲಾ ಶಿಕ್ಷಣ ಇಲಾಖೆ ಸಚಿವರು ಮಧು ಬಂಗಾರಪ್ಪ ಕಂದಾಯ ಸಚಿವರು ಕೃಷ್ಣ ಬೋರೇಗೌಡ ಈಶ್ವರ ಖಂಡ್ರೆ ಕೆ ಎನ್ ರಾಜಣ್ಣ ವಸತಿ ಸಚಿವರು ಜಮೀರ್ ಅಹಮದ್ ಖಾನ್, ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್ ಬೈರತಿ ಸುರೇಶ ಮಾಜಿ ಶಾಸಕರು ವೆಂಕಟ ರಾಮಣ್ಣ ಕಾಂಗ್ರೆಸ್ ಸರ್ಕಾರ ದ ಇತರೆ ಸಚಿವರು ಜಿಲ್ಲೆಯ ಮುಖಂಡರು ಪಕ್ಷದ ಕಾರ್ಯಕರ್ತರು ಹಾಗೂ ತುಮಕೂರು ಜಿಲ್ಲೆಯ ಸಾವಿರಾರು ಜನರು ಭಾಗವಹಿಸಿದ್ದರು.
ವರದಿ ಕೊಟ್ಟ ಕರಿಯಣ್ಣ




















