ಬೀದರ್/ ಬಸವಕಲ್ಯಾಣದ ನಗರದ ಧರ್ಮ ಪ್ರಕಾಶ್ ಗಲ್ಲಿ ವಾರ್ಡ್ ನಂಬರ್ 11 ರಲ್ಲಿ ಮತ್ತು ನಗರದ ಎಲ್ಲಾ ಬಡಾವಣೆಗಳಲ್ಲಿ ಮಳೆಗಾಲದ ಮುಂಚೆಯೇ ಎಲ್ಲಾ ನಾಲಿ ಚರಂಡಿಗಳನ್ನು ತುಂಬಿ ಗಮ್ಮು ವಾಸನೆ ಬರುತ್ತಿದೆ ಆದ್ದರಿಂದ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಏಕೆಂದರೆ ಮಳೆಗಾಲ ಶುರುವಾದಾಗ ಮಳೆ ನೀರನ್ನು ರೋಡಿನ ಮೇಲೆ ಹಾಗೂ ಮನೆ ಒಳಗೆ ನೀರು ಹರಿಯುವುದು ಹಾಗೂ ಸಾರ್ವಜನಿಕರಿಗೆ ಮತ್ತು ಸಣ್ಣ ಮಕ್ಕಳಿಗೆ ಶಾಲೆಗೆ ಹೋಗುವ ತೊಂದರೆ ಅನುಭವಿಸಬೇಕಾಗುತ್ತದೆ ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತದೆ ಕೂಡಲೇ ನಗರ ಸಭೆಯ ಪೌರಾಯುಕ್ತರು ಸಂಬಂಧಪಟ್ಟ AEE ಮತ್ತು JE ಆಯಾ ಸರ್ಕಲ್ ಸೆಲೆಕ್ಟರಿ ಇನ್ಸ್ ಪೆಕ್ಟರ್ ಅಧಿಕಾರಿಗಳಿಗೆ ಮತ್ತು ಲೇಬರಗಳಿಗೆ ಕರೆಸಿ ಸಭೆ ಮಾಡಿ ಎಲ್ಲಾ ಬಡಾವಣೆಯ ನಾಲಿ ಚರಂಡಿಗಳು ಮತ್ತು ಗಿಡಗಂಟಿಗಳು ಮಳೆಗಾಲದ ಮುಂಚೆಯೇ ಎಲ್ಲಾ ನಾಲಿ ಚರಂಡಿಗಳನ್ನು ಸ್ವಚ್ಛಗೊಳಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕೆಂದು ನಗರಸಭೆ ಪೌರಾಯುಕ್ತರಿಗೆ ಸಮಾಜಿಕ ಹೋರಾಟಗಾರ ಶ್ರೀ ಧನರಾಜ ಡಿ. ರಾಜೋಳೆ ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ




















