ಹುನಗುಂದ: ವಿಜ್ಞಾನ ಭಾರತಿ-ಇಂಡಿಯಾ (ವಿಭಾವಾಣಿ) ನವದೆಹಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಬರ್ಡ್ಸ ಹುನಗುಂದ ಆತ್ಮ ಸಾಕ್ಷಿ ತರಬೇತಿ ಕೇಂದ್ರದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಬಲವರ್ಧನೆ ಮತ್ತು ದೃಷ್ಟಿಕೋನದ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು,
ಕಾರ್ಯಕ್ರಮವನ್ನು ವಿಭಾವಾಣಿ -ಇಂಡಿಯಾದ ಕಾರ್ಯ ನಿರ್ವಾಹಕ ನಿರ್ದೇಶಕ ರಾಜೀವ್. ಎನ್. ಪಿ ಉದ್ಘಾಟಿಸಿ ಮಾತನಾಡಿ ವಿಭಾವಾಣಿ ಇದು ಒಕ್ಕೂಟ ಅಲ್ಲ ಅಸೋಶಿಯೇಶನ್ ಆಗಿದೆ ಕರ್ನಾಟಕ ಚಾಪ್ಟರ ನೋಂದಣಿ ಮಾಡಿಸಿದೆ ಸ್ವಯಂ ಸೇವಾ ಸಂಸ್ಥೆಗಳಿಗೆ ಸಿ.ಎಸ್. ಆರ್ ಹಣಕಾಸಿನ ನೆರವು ಸಿಗಲೆಂದು ಪ್ರಪೋಜಲ್ ಬರೆಯುವ ಕುರಿತು ತರಬೇತಿ ನೀಡುತ್ತಿದೆ, ಇಲ್ಲಿ ಸದಸ್ಯತ್ವ ಪಡೆದುಕೊಂಡರೆ ಸಂಸ್ಥೆಗಳು ಏನಾದರೂ ಪಡೆದುಕೊಳ್ಳುತ್ತಾರೆ, ವಿವಿಧ ಅನುಭವಿಕರು ಹಾಗೂ ಅನುಭವಸ್ಥರನ್ನು ಒಗ್ಗೂಡಿಸುತ್ತಿದೆ, ಕಳೆದ 10 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದೆ, ವಿಜ್ಞಾನ ಎಂದರೆ ಎಂಜಿನೀಯರ್ ಅಥವಾ ಸಾಪ್ಟವೇರ್ ಅಲ್ಲ ವಿಜ್ಞಾನ ಎಂದರೆ ಕೆಲಸಕ್ಕೆ ತಕ್ಕಂತೆ ಬದಲಾವಣೆಗೆ ಒಗ್ಗೂಡುವುದು ಆಗಿದೆ, ಉದಾ: ಕೊರೋನಾ ಅವಧಿಯಲ್ಲಿ ಮಾಸ್ಕ್ ಧರಿಸುವುದು ಸ್ಯಾನಿಟೈಜರ್ ಉಪಯೋಗ, ಅಂತರ ಕಾಯ್ದುಕೊಳ್ಳುವುದು ವಿಭಾವಾಣಿಗೆ ಸದಸ್ಯರಾಗುವುದರೊಂದಿಗೆ ವಿಭಾವಾಣಿ ನಿಮ್ಮದಾಗಿರುತ್ತದೆ, ಮುಂದಿನ ಮೂರು ವರ್ಷಗಳ ಕಾರ್ಯತಂತ್ರ ಯೋಜನೆ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಬರ್ಡ್ಸ ಸಂಸ್ಥೆಯ ಮಹಾಂತೇಶ ಅಗಸಿಮುಂದಿನ ಮಾತನಾಡುತ್ತಾ ಹುದ್ದೆಗಳು ಆದೇಶ ಮಾಡುವುದಕ್ಕಲ್ಲ ತಳ ಮಟ್ಟದಿಂದ ಕೆಲಸ ನಿರ್ವಹಿಸುವುದು ಕೆಳ ವರ್ಗದ ಜನರ ಅಭ್ಯುದಯಕ್ಕಾಗಿ ಶ್ರಮಿಸುದಾಗಿದೆ, ಅಲ್ಪ ಸಮಯದಲ್ಲಿ ತಾವು ಬಿಡುವು ಮಾಡಿಕೊಂಡು ಭಾಗವಹಿಸಿರುವುದು ಶ್ಲಾಘನೀಯ, ನಿಮಗೆ ಉಚಿತವಾಗಿ ಸೇವೆ ಬೇಕೆಂದರೆ ವಿಭಾವಾಣಿ ಹಾಗೂ ಬರ್ಡ್ಸ ಸಂಸ್ಥೆ ಕೊಡಲು ಸದಾಸಿದ್ದ ಎಂದರು.
ರಾಜ್ಯಅಧ್ಯಕ್ಷರಾದ ಸುಗರಯ್ಯಸ್ವಾಮಿ ಸ್ವಾಗತಿಸಿ ಸಂಪನ್ಮೂಲ ಕ್ರೂಢೀಕರಣ ಕುರಿತು ಮಾತನಾಡಿದರು, ಕಾರ್ಯದರ್ಶಿ . ವಿ. ಚಕ್ರಪಾಣಿ ವಿಭಾವಾಣಿ-ಕನಾಟಕ ಚಾಪ್ಟರ ಕುರಿತು ಮಾತನಾಡಿದರು ರಾಜ್ಯ ಸಂಯೋಜಕ ಡಿ.ಟಿ. ಶ್ರೀನಿವಾಸ ಮೂರ್ತಿ ಸಂಸ್ಥೆಯ ರಚನೆ ಹಾಗೂ ವಿಭಾವಾಣಿ ಸದಸ್ಯತ್ವ ಕುರಿತು ವಿವರಿಸಿದರು, ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಡಾ.ಜಿ.ವಿ. ಲಷ್ಮೀದೇವಿ ಮಹಿಳಾ ಕಾರ್ಯಕ್ರಮ ಕುರಿತು ವಿವರಿಸಿದರು, ಸಂಪನ್ಮೂಲ ವ್ಯೆಕ್ತಿಗಳಾದ ಮಹಾಂತೇಶ ಅಗಸಿಮುಂದಿನ ಸಿ.ಎಸ್. ಆರ್ ಚಟುವಟಿಕೆ ಕುರಿತು ಮಾಹಿತಿ ನೀಡಿದರು ಶ್ರೀ. ಗೋವಿಂದಯ್ಯ ಯೋಜನಾ ವರದಿ ತಯಾರಿಕೆ ಪದ್ಧತಿ ವಿವರಿಸಿದರು, ಆನಂದ.ಬಿ.ಶಿರಬೂರ ಗ್ರೀನ್ ಹೌಸ್ ಹಾಗೂ ಪರಿಸರದ ಸಂರಕ್ಷಣೆ ಕುರಿತು ಮಾತನಾಡಿದರು.
ಶ್ರೀ. ವಿ.ಎನ್. ಮೂರ್ತಿ ಹಾಗೂ ಹರೀಶ ಫೀಡಬ್ಯಾಕ್ ಹೇಳಿದರು. ಶ್ರೀ.ಚಕ್ರಪಾಣಿ ವಂದಿಸಿದರು. ಕಾರ್ಯಕ್ರಮವನ್ನು ವಿರೇಶ ಅಳವಂಡಿ ನಿರ್ವಹಿಸಿದರು. ಒಟ್ಟು 50 ಸಂಸ್ಥೆಗಳ ಮುಖ್ಯಸ್ಥರುಗಳು ಭಾಗವಹಿಸಿದ್ದರು.
- ಕರುನಾಡ ಕಂದ ಸುದ್ದಿ




















