ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಔಷಧಿಯ ವ್ಯಾಪಾರಸ್ಥರ ಸಂಘ ತಾಳಿಕೋಟೆ ಅಖಿಲ ಭಾರತ ಕೆಮಿಸ್ಟಿಗಳ ಮುಷ್ಕರ ಮಾಡಲಾಯಿತು.
ಅವರ ಪ್ರಮುಖ ಬೇಡಿಕೆಗಳು.
1) ಆನ್ಲೈನ್ ಮೂಲಕ ಔಷಧಿಗಳ ಮಾರಾಟವನ್ನು ತಡೆಗಟ್ಟುವುದು.
2) ಕಾರ್ಪೊರೇಟ್ ಕಂಪನಿಗಳಿಂದ ಅತಿಯಾದ ರಿಯಾಯಿತಿಯನ್ನು ತಡೆಗಟ್ಟುವುದು.
3) ನಕಲಿ ಅಮಾನ್ಯ ಔಷಧಿಗಳನ್ನು ತಡೆಗಟ್ಟುವುದು ಇವರ ಪ್ರಮುಖ ಬೇಡಿಕೆಗಳಾಗಿದ್ದು ದಿನಾಂಕ 20-5- 2026 ರ ಬುಧವಾರ ಮುಷ್ಕರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅಖಿಲ ಭಾರತ ಕೆಮಿಸ್ಟಿಗಳು ಮತ್ತು ಡ್ರಗಿಸ್ಟ್ ಗಳ ಸಂಘಟನೆಯ ಅಧ್ಯಕ್ಷರಾದ ಜೆ ಎಸ್ ಶಿಂಡಿ, ಸಾಮಾನ್ಯ ಕಾರ್ಯದರ್ಶಿ ರಾಜೀವ್ ಸಿಂಘಾಲ್, ಅಧ್ಯಕ್ಷರಾದ ಸಂತೋಷ್ ಪ್ರಥಮಶೆಟ್ಟಿ, ಉಪಾಧ್ಯಕ್ಷರಾದ ಕಾಂತು ಸಜ್ಜನ್, ಉಪಾಧ್ಯಕ್ಷರಾದ ವಾಸುದೇವ್ ಹೇಬ್ಸೂರ, ಆಯುಬ್ ಸಗರ,ರವಿ ಪಾಟೀಲ, ಸುಭಾಷ್ ಸಾಲಂಕಿ, ಅರಸಲನ ಅಬಾಲೆ, ಶಿವಲಿಂಗ ಸಾಲಂಕಿ, ಖಾಲಿದ ಅಲಮೇಲ್, ರಫೀಕ್ ಜಮಾದಾರ್, ಮೈನು ಕೊರ್ತಿ ಸೇರಿದಂತೆ ಹಲವಾರು ಔಷಧ ವ್ಯಾಪಾರಸ್ಥರು ಭಾಗವಹಿಸಿದ್ದರು.
ವರದಿ ನಜೀರ್ ಅಹಮದ್ ಚೋರಗಸ್ತಿ.




















