ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿರುವ ರೈತರಿಗೆ ಅತಿ ಕಡಿಮೆ ರಿಯಾಯಿತಿ ದರದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಿಕೊಡಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜಂಟಿ ಕೃಷಿ ನಿರ್ದೇಶಕರು ಕಲಬುರ್ಗಿ ಇವರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಟ್ರ್ಯಾಕ್ಟರ್ ನೀಡಿರುತ್ತಾರೆ ಈ ಟ್ರಾಕ್ಟರ್ ಸಹಕಾರ ಸಂಘದ ಎದುರುಗಡೆ ಜಾಗದ ಅಡಚಣೆ ಇರುವುದರಿಂದ ರಟಕಲ್ ಗ್ರಾಮ ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ಇಡಲಾಗಿತ್ತು. ಆದರೆ ಈಗ ಬಂದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಯಾರ ಗಮನಕ್ಕೂ ತರದೆ ಸಾರ್ವಜನಿಕವಾಗಿ ಡಂಗೂರ ಸಾರದೆ,ಯಾವುದೇ ಕಾನೂನು ಬದ್ಧವಾಗಿ ಟೆಂಡರ್ ಪ್ರಕ್ರಿಯೆ ಮಾಡದೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಟ್ರ್ಯಾಕ್ಟರ್ ಹಾಗೂ ಸುಮಾರು ವರ್ಷಗಳಿಂದ ಪಂಚಾಯಿತಿಯಲ್ಲಿ ಇರುವ ಕೆಲಸಕ್ಕೆ ಬರುವ ಹಾಗೂ ಬಾರದೆ ಇರುವ ಎಲ್ಲಾ ಮೋಟಾರ್ ಗಳನ್ನು ತಮಗೆ ಬೇಕಾದ ವ್ಯಕ್ತಿಗಳಿಗೆ ಮಾರಾಟ ಮಾಡಿರುತ್ತಾರೆ ಎಂದು ನಮ್ಮ ಗಮನಕ್ಕೆ ಬಂದಿರುತ್ತದೆ. ಇದರ ಬಗ್ಗೆ ಪರಿಶೀಲಿಸಿ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಿ ಸೇವೆಯಿಂದ ಅಮಾನತುಗೊಳಿಸಬೇಕು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎದುರುಗಡೆ ಅನಾಧಿಕೃತವಾಗಿ ( ಸರಕಾರಿ ಜಾಗದಲ್ಲಿ) ಅನಧಿಕೃತ ವ್ಯಕ್ತಿಗಳು ಅಂಗಡಿಗಳು ನಿರ್ಮಾಣ ಮಾಡಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ಚಟುವಟಿಕೆಗಳಿಗೆ ಅನಾನುಕೂಲವಾಗುತ್ತಿದೆ. ಆದ್ದರಿಂದ ಇದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕು. ಕೃಷಿ ಪತ್ತಿನ ಸಹಕಾರ ಸಂಘದ ರಸಗೊಬ್ಬರ ಹಾಗೂ ಬೆಂಬಲ ಬೆಲೆಯಲ್ಲಿ ಖರೀದಿಸಿದ ತೊಗರಿ, ಸೋಯಾ, ಹೆಸರು ,ಉದ್ದು, ಲಾರಿ ಮುಖಾಂತರ ತರಲು ಹಾಗೂ ವೈಯಲು ಅನಾನುಕೂಲವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ರೈತರ ಹಿತದೃಷ್ಟಿಯಿಂದ ತೆರವುಗೊಳಿಸಬೇಕೆಂದು ಈ ಧರಣಿ ಸತ್ಯಾಗ್ರಹದ ಮೂಲಕ ಮನವಿ ಪತ್ರವನ್ನು ನೀಡಿದರು. ಇದರ ಬಗ್ಗೆ ತಾವು ವಿಳಂಬ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಎದುರುಗಡೆ ಉಪವಾಸ ಸತ್ಯಾಗ್ರಹ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಬಸವಣ್ಣಪ್ಪ ಡಿಗ್ಗಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ( EO ) ಇವರಿಗೆ ಈ ಮನವಿ ಪತ್ರ ಕೊಡಲಾಯಿತು.
ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರೇವಣಸಿದ್ಧ ಬಡಾ,ಕಾಶಿನಾಥ್ ಚೋಕಾ,ಶರಣಬಸಪ್ಪ ಮಾಮಶೆಟ್ಟಿ,ವೀರಣ್ಣ ಗಂಗಾಣಿ,ಶಿವರಾಜ್ ಪಾಟೀಲ್ ಗೋಣಿಗಿ,ಕಲ್ಯಾಣರಾವ ತಳಕೇರಿ,ಗುಂಡಯ್ಯ ಸ್ವಾಮಿ ಮಠಪತಿ,ಮಲ್ಲಿಕಾರ್ಜುನ್ ಬುಳ್ಳ,ಮಲ್ಲು ಮರುಗುತ್ತಿ,ವಿಜಯಕುಮಾರ್ ಚೇಂಗಟಿ,ಶರಣು ಪಾಟೀಲ್ ಮಾತಕಪಲ್ಲಿ,ಸೋಮಣ್ಣ ಸಾಹುಕಾರ,ರಮೇಶ್ ಪಾಟೀಲ ರವಿ ಬಸ್ ಶೆಟ್ಟಿ,ಶರಣು ಸಿಗಿ ಸೇರಿದಂತೆ ಇನ್ನಿತರ ರೈತ ಮುಖಂಡರು ಈ ಹೋರಾಟದಲ್ಲಿ ಭಾಗಿಯಾಗಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್




















