ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರೀತಿ, ವಿಶ್ವಾಸದಿಂದ ಬಕ್ರೀದ್ ಆಚರಿಸಿ : ಡಿ. ವೈ. ಎಸ್. ಪಿ. ಪ್ರಸಾದ್ ಕೆ. ಗೋಕಲೆ

ಬಳ್ಳಾರಿ / ಕಂಪ್ಲಿ : ಯಾವುದೇ ಧರ್ಮದ ಹಬ್ಬ, ಹರಿದಿನ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು. ಜನರು ಪ್ರೀತಿ ವಿಶ್ವಾಸದಿಂದ ಹಬ್ಬ ಆಚರಣೆ ಮಾಡಬೇಕು ಎಂದು ಡಿ. ವೈ. ಎಸ್. ಪಿ. ಪ್ರಸಾದ್ ಕೆ. ಗೋಕಲೆ ಹೇಳಿದರು.

ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಮೇ 28ರಂದು ಜರುಗುವ ಬಕ್ರೀದ್ ಸಲುವಾಗಿ ಗುರುವಾರ ನಡೆದ ‘ಶಾಂತಿ ಪಾಲನೆ ಸಭೆ’ಯಲ್ಲಿ ಮಾತನಾಡಿದರು.

ಹಿರಿಯರು ಯುವಕರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಅಂಥ ಸಂದರ್ಭದಲ್ಲಿ ಎಲ್ಲರೂ ಕಾನೂನು ಪರಿಪಾಲನೆ ಮಾಡಿ ಶಾಂತತೆ ಕಾಪಾಡಬೇಕು. ಜನರಿಂದ ಜನರಿಗಾಗಿ ಇರುವ ಹಬ್ಬಗಳು ಸಂತಸ ಸಂಭ್ರಮ ತರಬೇಕು. ಅದು ಬಿಟ್ಟು ಕೆಲವೊಂದು ಕಿಡಿಗೇಡಿಗಳಿಂದ ಶಾಂತಿ ಭಂಗ ಬರಬಾರದು. ಹಿರಿಯರು ಆ ಕಡೆ ಲಕ್ಷ ಕೊಡಬೇಕು. ಸಮಾಜ ಘಾತುಕ ಶಕ್ತಿ ಹತ್ತಿಕ್ಕಬೇಕು ಎಂದರು.

ಪಿ. ಐ. ಕೆ. ಬಿ. ವಾಸುಕುಮಾರ್ ಮಾತನಾಡಿ, ಸೌಹಾರ್ದತೆ ಹಬ್ಬವನ್ನು ಆಚರಿಸಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಟ್ಟಾಗಿ, ಶಾಂತಿ ಹಾಗೂ ಸೌಹಾರ್ದತೆಯಿಂದ ಬಕ್ರೀದ್ ಹಬ್ಬವನ್ನು ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಕಾಪಾಡಲು ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸೂಚಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಯಾವುದೇ ಗೊಂದಲಗಳಿಗೆ ಆಸ್ಪದ ನೀಡಬಾರದು. ಹಬ್ಬದ ದಿನಗಳಲ್ಲಿ ಯುವಕರು ಮತ್ತು ಅಪ್ರಾಪ್ತರು ಅಡ್ಡಾದಿಡ್ಡಿ ಬೈಕ್ ಚಾಲನೆ ಮಾಡಿ ಕಾನೂನು ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಪ್ರಮುಖರಾದ ಕೆ. ಎಂ. ಹೇಮಯ್ಯಸ್ವಾಮಿ, ಎನ್. ಹಬೀಬಿ ರೆಹಮಾನ್ ಕೆ. ಮೆಹಬೂಬ್ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಎಎಸ್ಐ ಬಸವರಾಜ್, ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಎಂ. ಉಸ್ಮಾನ್, ಎಂ. ಬಾಬು, ಅಸ್ಲಾಂ, ಮೌಲಾಹುಸೇನ್, ನವಾಬಸಾಬ್ , ಬಿ. ಜಾಫರ್ ಸಾಧಿಕ್, ಕೆ. ಮಸ್ತನವಲಿ ಕಡಪ, ಅತ್ತಾವುಲ್ಲಾ, ಜಹೀರುದ್ದಿನ, ವಾಹಿದ್, ಸಿದ್ದನಗೌಡ, ದೇವಣ್ಣ, ಕನಕಪ್ಪ ಹನುಮಂತಪ್ಪ, ದೊಡ್ಡಬಸಪ್ಪ, ರಮೇಶ, ನಾಗಪ್ಪ ಸೇರಿದಂತೆ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!