ಮುದ್ದೇಬಿಹಾಳ : ಶ್ರೀ ಮಲ್ಲಿಕಾರ್ಜುನ ಶ್ರೀಕ್ಷೇತ್ರ ನಾಲತವಾಡದಲ್ಲಿ ಷ.ಬ್ರ. ಡಾ. ಶ್ರೀ ಶ್ರೀ ಶ್ರೀ ಗುರು ಶಾಂತವೀರ ಮಹಾಸ್ವಾಮಿಗಳು ಭೂಕೈಲಾಸ ಮೇಲು ಗದ್ದಿಗೆ ಮಠ ಇಟಗಿ ಇವರ ಅಧ್ಯಕ್ಷತೆಯಲ್ಲಿ ಜಂಗಮ ವಟುಗಳಾದ ವಿನಾಯಕ ಜಗದೀಶ ಸಾಲಿಮಠ ವೀರೇಶ ಜಗದೀಶ ಸಾಲಿಮಠ ಶಿವಯ್ಯ ಮ. ತೆಗ್ಗಿನಮಠ ಮಲ್ಲಯ್ಯ ಮ. ತೆಗ್ಗಿನಮಠ ಇವರುಗಳಿಗೆ ಅಯ್ಯಾಚಾರ ದೀಕ್ಷಾ ನೀಡಲಾಯಿತು.
ಈ ಸಂದರ್ಭದಲ್ಲಿ ಸುರೇಶ ಸ್ವಾಮಿ ಹಿರೇಮಠ ಪ್ರಭು ಸ್ವಾಮಿ ಹಿರೇಮಠ ನಾಲತವಾಡದ ಸದ್ಭಕ್ತರು ಉಪಸ್ಥಿತರಿದ್ದರು.
ಶ್ರೀ ಸುರೇಶ ಸ್ವಾಮಿ ಹಿರೇಮಠ ಸ್ವಾಗತಿಸಿದರು.
ಶ್ರೀ ಅಮರೇಶ್ವರ ಪಬ್ಲಿಕ್ ಶಾಲೆ ಜ್ಞಾನ ಸಮೃದ್ಧಿ ಗುರುಕುಲ ಕಲಿಯುವ ಮನೆ ಮಕ್ಕಳು ಪ್ರಾರ್ಥಿಸಿದರು. ಶ್ರೀ ಸಂಗಮೇಶ ಶಾಂತಪ್ಪ ನವಲಿ ನಿರೂಪಿಸಿದರು.
ಶ್ರೀ ಪ್ರಭುಸ್ವಾಮಿ ಹಿರೇಮಠ ವಂದಿಸಿದರು.
- ಕರುನಾಡ ಕಂದ ಸುದ್ದಿ




















