ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ಪ್ರತಿಷ್ಠಿತ ಆಸ್ಪತ್ರೆಯಾದ ಮೂಲಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೂರನೇ ಮಹಡಿಯ ಮೇಲೆ ಕಟ್ಟಡಕ್ಕೆ ಬಣ್ಣ ಹಚ್ಚುವಾಗ 50 ವರ್ಷ ವಯಸ್ಸಿನ ಕಾರ್ಮಿಕ ಶ್ರೀ ನಾಗಭೂಷಣ ಮಹಾಗಾಂವ ಆಯ ತಪ್ಪಿ ಕೆಳಗಡೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತನು ಬಸವಕಲ್ಯಾಣ ತಾಲ್ಲೂಕಿನ ಬಗದುರಿ ಗ್ರಾಮದವನ್ನಾಗಿರುತ್ತಾನೆ. ಘಟನಾ ಸ್ಥಳಕ್ಕೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯ ಕ್ರೈಂ ಪಿ ಎಸ್. ಐ. ಸುರೇಶ ಹಜ್ಜರಗಿ ರವರು ಭೇಟಿ ನೀಡಿ, ಪ್ರಾಥಮಿಕ ಹಂತದ ತನಿಖೆ ನಡೆಸಿದ್ದಾರೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.
ವರದಿ :ಶ್ರೀನಿವಾಸ ಬಿರಾದಾರ




















