ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮಾತಿನ ಮನೆಯ 129ನೆಯ ಕಾರ್ಯಕ್ರಮವಾಗಿ ಗಮಕ ವಿದುಷಿ ಶ್ರೀಮತಿ ಸುಮಿತ್ರ ವಿಶ್ವನಾಥ್ ಹಾಗೂ ಶ್ರೀ ಸಿ ಎನ್ ಸುಬ್ಬಣ್ಣ ಅವರಿಂದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಇದೇ ಸಮಯದಲ್ಲಿ ಶಾಲಾ ಮಕ್ಕಳಿಗೆ ನೀಡಲು ಮಾತಿನ ಮನೆ ಮುದ್ರಿಸಿರುವ ನೋಟ್ ಪುಸ್ತಕವನ್ನು ಲಯನ್ ಬೈಸಾನಿ ಅಶೋಕ್ ಕುಮಾರ್ ಅವರು ಜನಾರ್ಪಣೆ ಮಾಡಿದರು.
ನಂತರದಲ್ಲಿ ಗಾಂಧಾರಿ ಶಾಪ ಗಮಕ ವಾಚನ ವ್ಯಾಖ್ಯಾನ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಸುಮಿತ್ರ ವಿಶ್ವನಾಥ್ ಹಾಗೂ ಶ್ರೀ ಸಿ ಎನ್ ಸುಬ್ಬಣ್ಣ ಅವರುಗಳನ್ನು ಮಾತಿನ ಮನೆಯ ಪರವಾಗಿ ರಾ ಸು ವೆಂಕಟೇಶ ಗೌರವಿಸಿದರು.
ಕಾರ್ಯಕ್ರಮವು ನಾಡಗೀತೆಯೊಂದಿಗೆ ಆರಂಭವಾಗಿ, ಶ್ರೀಮತಿ ಶಾಂತಲಾ ಅಶೋಕ್ ಅವರ ನಿರೂಪಣೆಯಲ್ಲಿ ನಡೆಯಿತು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















