ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಧರ್ಮ, ಪರಿಸರ ಹಾಗೂ ಕೃಷಿ ಮತ್ತು ರೈತಾಪಿ ವರ್ಗದ ಕಲ್ಯಾಣಕ್ಕಾಗಿ ಮಹಾಸಂಕಲ್ಪದ ಪ್ರಯುಕ್ತ

ಜೂನ್ 28 ರಂದು ನಡೆಯಲಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಮಹಾ ಸಮಾವೇಶದ ಪೂರ್ವಭಾವಿ ಸಭೆ

ಬೀದರ ಜಿಲ್ಲೆ ಬಸವಕಲ್ಯಾಣ : ನಗರದ ಶ್ರೀ ಸದ್ಗುರು ಸದಾನಂದ ಸ್ವಾಮಿ ಮಠದ ಆವರಣದಲ್ಲಿ ರವಿವಾರ ಮಧ್ಯಾಹ್ನ 12:00 ಗಂಟೆಗೆ ಪೂಜ್ಯ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಮುಚಳಂಬರವರ ನೇತೃತ್ವದಲ್ಲಿ ಇದೇ ಜೂನ್ 28 ರವಿವಾರದಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಹಿಂದೂ ಸರ್ವ ಸಮಾಜದ ಒಕ್ಕೂಟ ಬಸವಕಲ್ಯಾಣ, ವತಿಯಿಂದ ಧರ್ಮ, ಪರಿಸರ, ಹಾಗೂ ಕೃಷಿ ಮತ್ತು ರೈತಾಪಿ ವರ್ಗದ ಕಲ್ಯಾಣಕ್ಕಾಗಿ ಮಹಾಸಂಕಲ್ಪದ ಪ್ರಯುಕ್ತ ಕಣ್ಣೀರಿ ಮಠದ ಪೂಜ್ಯ ಶ್ರೀ ಅದೃಷ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು.

ನೇತೃತ್ವ ವಹಿಸಿದ ಪೂಜ್ಯ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಮಾತನಾಡಿ, ಮೂಢನಂಬಿಕೆಗಳು ಅಲ್ಲಗಳೆದರೆ ಸಹಿಸೇವು, ಮೂಲಭೂತ ಅಂಶಕ್ಕೆ ಧಕ್ಕೆ ತಂದರೆ ಸಹಿಸಲಾಗದು. ಜಾತಿ ಪಂಥ ಬೇರೆಯಾದರು ನಾವೆಲ್ಲ ಬಸವಭಕ್ತರೇ, ನಾವೆಲ್ಲಾ ಹಿಂದೂಗಳೇ, ಹಾಗಾಗಿ ಬಸವ ಭೂಮಿಯಲ್ಲಿ ಜಿಲ್ಲೆಯ ಹಾಗೂ ರಾಜ್ಯದ ನಾನಾ ಕಡೆಯಿಂದ 300 ಕ್ಕೂ ಹೆಚ್ಚಿನ ಸಂಖ್ಯೆಯ ಸಂತರ ನೇತೃತ್ವದಲ್ಲಿ ಐತಿಹಾಸಿಕ ಬಸವಾದಿ ಶಿವಶರಣರ ಹಿಂದೂ ಮಹಾ ಸಮಾವೇಶ ಜರುಗಲಿದೆ ಎಂದು ತಿಳಿಸಿದರು.
ಇದೆ ಸಂಧರ್ಭದಲ್ಲಿ ಬಸವಕಲ್ಯಾಣ ಗವಿಮಠದ ಪೂಜ್ಯರಾದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಈ ಕಾರ್ಯಕ್ರಮ ಯಾವುದೇ ಜಾತಿ, ಮತ ಎನ್ನದೆ ಪಕ್ಷಾತೀತವಾಗಿ ಇದ್ದು ನಾವೆಲ್ಲರೂ ಒಂದು ನಾವೆಲ್ಲರೂ ಬಂಧು ನಾವೆಲ್ಲರೂ ಹಿಂದೂ ಎನ್ನುವ ಭಾವದಿಂದ ಬೃಹತ್ ಹಿಂದೂ ಸಮಾವೇಶ ನಡೆಯಲಿದ್ದು, ನೂರಾರು ಮಾತೆಯರಿಂದ ಪೂರ್ಣ ಕುಂಭದೊಂದಿಗೆ ಡೊಳ್ಳು ಕಹಳೆ, ನೃತ್ಯ, ಭಜನೆ, ಕೋಲಾಟ ಹೀಗೆ ಹತ್ತು ಹಲವಾರು ಕಲಾತಂಡಗಳೊಂದಿಗೆ, ಸಾವಿರಾರು ಸಂಖ್ಯೆಯಲ್ಲಿ ಬಸವಕಲ್ಯಾಣ ನಗರದಲ್ಲಿ ಭವ್ಯ ಮೆರವಣಿಗೆ ಮತ್ತು ಬೃಹತ್ ಸಮಾವೇಶ ಐತಿಹಾಸಿಕವಾಗಲಿದೆ ಎಂದು ನುಡಿದರು.
ಪೂಜ್ಯ ಶ್ರೀ ಕಲ್ಲೂರ ಮತ್ತು ಸದಲಾಪೂರದ ಮಠದ ಶ್ರೀಗಳು ಮಾತನಾಡಿ ಹಿಂದೂಗಳು ಒಗ್ಗಟ್ಟಾಗಲು ಮತ್ತು ಜಾಗೃತರಾಗಲು ಇಂತಹ ಕಾರ್ಯಕ್ರಮಗಳು ಆಗುವುದು ಅವಶ್ಯಕವಾಗಿದೆ ಎಂದು ನುಡಿದರು.
ಮುಖಂಡರಾದ ಶ್ರೀ ಗುಂಡುರೆಡ್ಡಿ ಕಮಲಾಪೂರೆ ರವರು ಮಾತನಾಡಿ, ಪಕ್ಷಾತೀತ ಮತ್ತು ಜಾತಿ ಮತ ಮರೆತು ನಾವೆಲ್ಲರೂ ಹಿಂದೂಗಳು ನಮ್ಮ ಧರ್ಮ ನಮ್ಮ ಹೆಮ್ಮೆ ನಾವಿಂದು ಜಾಗೃತವಾಗದಿದ್ದರೆ ಎಂದಿಗೂ ಸಾಧ್ಯವಿಲ್ಲ ಹಾಗಾಗಿ ಸಾವಿರಾರು ಹಿಂದೂ ಸಹೋದರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಐತಿಹಾಸಿಕವಾಗಿ ಮತ್ತು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಈ ಸಂಧರ್ಭದಲ್ಲಿ ಡಾ. ಬಸವರಾಜ ಸ್ವಾಮಿ, ರವಿ ಚಂದನಕೆರೆ, ಶ್ರೀಶೈಲ್ ವಾತಡೆ, ಸಂಜು ಜಾಧವ, ದೀಪಕ ಗಾಯಕವಾಡ, ಲಕ್ಷ್ಮೀಪುತ್ರ ನಿಂಬಾಳ್ಯರ, ಅರ್ಜುನ ಕನಕ, ಸಂಜುರೆಡ್ಡಿ ಯರಬಾಗ, ಡಾ. ಧನರಾಜ ಚಂದನಕೆರೆ, ಸುನೀಲ ಮೆಕಾಲೆ, ಜಗದಿತ ಅವಸೆ ಹಾಗೂ ಇತರರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಯುವಕರು ಹಿರಿಯರು ಸಂತರು ರಾಜಕೀಯ ಮುಖಂಡರು ಹೀಗೆ ನೂರಾರು ಜನಸಂಖ್ಯೆಯಲ್ಲಿ ಸೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ರವಿ ನಾವದ್ಗೇಕರ ರವರು ಬಸವಕಲ್ಯಾಣದಲ್ಲಿ ಸಂತರ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಹಿಂದೂಪರ ಸಮಾವೇಶದ ರೂಪರೇಷೆಗಳನ್ನು ತಿಳಿಸಿ ಹಿಂದೂಪರ ಸಂಘಟನೆ ಎಲ್ಲಾ ಸಹಯೋಗದೊಂದಿಗೆ ಈ ಕಾರ್ಯಕ್ರಮ ಐತಿಹಾಸಿಕವಾಗಲಿದ್ದು ಸಕಲ ಹಿಂದೂ ಬಾಂಧವರು ಈ ಕಾರ್ಯಕ್ರಮದ ಯಶಸ್ವಿಗೆ ತನು ಮನ ಧನದಿಂದ ಕೈ ಜೋಡಿಸಬೇಕೆಂದು ಕೋರಿದರು. ಅದೇ ರೀತಿ ಲೋಕೇಶ ಮೋಳಕೇರೆ ಸ್ವಾಗತಿಸಿ ವಂದಿಸಿದರು.

ವರದಿ :ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!