
ಕೊರಟಗೆರೆ :ಕೆ ಪಿ ಎಸ್ ಹೊಳವನಹಳ್ಳಿ ಶಾಲಾ ಪ್ರಾರಂಭೋತ್ಸವ ಇಂದು ಬಹಳ ಸಂಭ್ರಮ ಸಡಗರದಿಂದ ಆರಂಭವಾಯಿತು.
ಎಲ್ಲಾ ಮಕ್ಕಳಿಂದ ಸರ್ಕಾರಿ ಶಾಲೆಗೆ ಸೇರಿಸಿ ಎಂದು ಘೋಷಣೆ ಕೂಗುತ್ತ ಸಾಗಿದರು.
ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ನಿಖಿತಾ ಮಾತನಾಡಿ. ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವುದಕ್ಕಿಂತ. ನಮ್ಮ ಶಾಲೆಯಲ್ಲಿ ಅನುಭವ ಶಿಕ್ಷಕರು ಇದ್ದರೆ ಉತ್ತಮವಾದ ಬೋದನೆ ಉತ್ತಮವಾದ ಶಾಲಾ ಕೊಠಡಿ ಹಾಗೂ ಕಂಪ್ಯೂಟರ್ ಕೊಠಡಿ. ರೋಬೋಟ್ ನಿಂದ ಪಠ್ಯ ಪ್ರವಚನ ತಂತ್ರಜ್ಞಾನ ಆಧಾರಿತ ಬೋಧನೆ ( ಸ್ಮಾರ್ಟ್ ಕ್ಲಾಸ್ ) ಮಧ್ಯಾಹ್ನದ ಬಿಸಿಯೂಟ ಜೊತೆಗೆ ಮೊಟ್ಟೆ ಬಾಳೆಹಣ್ಣು ಮತ್ತು ಸ್ವಚ್ಛ ಹಾಗೂ ವಿಶಾಲವಾದ ಆಟದ ಮೈದಾನ ಎಷ್ಟು ನಮ್ಮ ಸರ್ಕಾರಿ ಶಾಲೆಯಲ್ಲಿ ಸಿಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ
ಎಸ್ ಡಿ ಎಂ ಸಿ ಉಪಾಧ್ಯಕ್ಷ ಜಯರಾಜ್, ಸಿ ಆರ್ ಪಿ ಹನುಮಂತರಯಪ್ಪ ಹೆಚ್ ವಿ,
ಶಾಲೆಯ ಮುಖ್ಯೋಪಾಧ್ಯಾಯರಾದ ರಾಜಣ್ಣ, ಆಶಾರಾಣಿ, ಶಿವಗಂಗಮ್ಮ,ದಾಸಪ್ಪ, ಪ್ರಶಾಂತ್ ಕುಮಾರ್, ಲಕ್ಷ್ಮಿ ನರಸಮ್ಮ, ಶೋಭಾ ಸೇರಿದಂತೆ ಪೋಷಕರು ಭಾಗವಹಿಸಿದರು.
ವರದಿ ಪ್ರಸನ್ನ ಕುಮಾರ್




















