ಬಾಗಲಕೋಟೆ : ಇದೇ ಜೂನ್ 28 ರಂದು ಬಾಗಲಕೋಟೆಯ ವಿದ್ಯಾಗಿರಿ ಹತ್ತಿರದ ಸಾಯಿ ಮಂದಿರದಲ್ಲಿ ಜೂನ್ 28 ರಂದು ಬೆಳಗ್ಗೆ 11 ರಿಂದ ಸಂಜೆ 4ರ ವರೆಗೆ ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ಸಂಗೀತೋತ್ಸವ ನಡೆಸಲಾಗುವುದು ಎಂದು ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನದ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಅವರು ಹೇಳಿದರು.
ಅವರು ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಹಿಂದುಸ್ತಾನಿ ಸಂಗೀತ .ಸುಗಮಸಂಗೀತ.ತತ್ವಪದ. ಜನಪದ ಪ್ರದರ್ಶನ.ಸಮೂಹ ನೃತ್ಯ ಕಾಯ೯ಕ್ರಮಗಳು ಜಿಲ್ಲೆಯ ಕಲಾವಿದರಿಂದ ನಡೆಯಲಿವೆ.
ಜಿಲ್ಲೆಯ ಆಸಕ್ತ ಕಲಾವಿದರಿಗೆ ಅವಕಾಶ ಕೊಡಲಾಗುವದು ಎಂದರು.
ಪ್ರತಿಷ್ಠಾನದ ಉಪಾಧ್ಯಕ್ಷರಾದ ಶರಣಬಸವ ಶಾಸ್ತ್ರಿಗಳು.ಹಿರಿಯ ಕಲಾವಿದ ಬಸವರಾಜ ಭಜಂತ್ರಿ.ಚಿನ್ನಪಗೌಡ ಗಿಡ್ಡಪ್ಪಗೋಳ.ಸಂಗೀತಗಾರ ಆನಂದಕುಮಾರ್ ಕಂಬಳಿಹಾಳ.ವಿಜಯ ಹಿರೇಮಠ.ದೇವೇಂದ್ದಪ್ಪ ಬಡಿಗೇರ. ಪವಿತ್ರ ಜಕ್ಕಪ್ಪನವರ ಮುಂತಾದವರು ಉಪಸ್ಥಿತರಿದ್ದರು ಪ್ರತಿಷ್ಠಾನದ ಕಾರ್ಯದರ್ಶಿ ಶಂಕರ ಲಮಾಣಿ ಅವರು ಸಭೆಯಲ್ಲಿ ಚರ್ಚಿಸಿದ ವರದಿಯನ್ನು ಸಭೆಗೆ ತಿಳಿಸಿ ವಂದಿಸಿದರು.
- ಕರುನಾಡ ಕಂದ ಸುದ್ದಿ




















