ಬಾಗಲಕೋಟೆ-ಮುಧೋಳ : ಪುರುಷೋತ್ತಮ ಅಧಿಕ ಮಾಸದ ಅಂಗವಾಗಿ ಶುಕ್ರವಾರ ಜೂನ್ ದಿ.5.ರಿಂದ ರವಿವಾರ ದಿ.14 ರ ವರೆಗೆ ಶ್ರೀದೇವಿ ಪುರಾಣ-ಪಾರಾಯಣ ಚಿಂತನ ಕಾರ್ಯಕ್ರಮವು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಜರುಗುವುದು ಎಂದು ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡ ಶಂಕರಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿದಿನ ಬೆಳಗ್ಗೆ ಶ್ರೀ ಸಿದ್ಧಾರೂಢರ ಪಾರಾಯಣ. ಸಂಜೆ 7.30ರಿಂದ 9 ರ ವರೆಗೆ ಶ್ರೀದೇವಿ ಪುರಾಣ-ಪಾರಾಯಣ ಜರುಗುವುದು.
ರವಿವಾರ ದಿ.14ರಂದು ಮುಂಜಾನೆ 10.ಗಂಟೆಗೆ ಪುರಾಣ ಮಂಗಲ. ಶ್ರೀಸಿದ್ಧಾರೂಢರ ಅಭಿಷೇಕ.ಮುತ್ತೈದೆಯರಿಗೆ ಉಡಿ ತುಂಬುವುದು.ಸಾಧಕ ಸೇವಕರಿಗೆ ಗೌರವ ಸಮರ್ಪಣೆ.ವಿವಿಧ ಕಲಾತಂಡಗಳಿಂದ ಭಜನೆ.ಮಂಗಲ.ಪ್ರಸಾದ ಜರುಗುವುದು.
ಈ ಎಲ್ಲಾ ಕಾರ್ಯಕ್ರಮಗಳು ಪರಮಪೂಜ್ಯ ಶ್ರೀ ಶಂಕರಾನಂದ ಶ್ರೀಗಳ ಸಾನಿಧ್ಯದಲ್ಲಿ ಆಶ್ರಮದ ಪೂಜ್ಯರಾದ ಶ್ರೀಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ನಡೆಯುವುದೆಂದು ಶಂಕರಗೌಡ ಪಾಟೀಲ ತಿಳಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















