ಬೀದರ್ : ಬೀದರ್ ಗ್ರಾಮೀಣ ಪೊಲೀಸ್ ಠಾಣೆ ರವರಿಂದ 6 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ, ವಾಹನ ವಶ ಆರೋಪಿತರ ಬಂಧನ.
ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ್ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ, ಬೀದರ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಟಿ. ಮರ್ಜಾಪೂರದ ಅರಣ್ಯ ಪ್ರದೇಶದ ಮುಖಾಂತರ ದ್ವಿಚಕ್ರ ವಾಹನಗಳ ಮೂಲಕ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವ ಮಾಹಿತಿಯಂತೆ, ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಬೀದರ್ ರವರ ಮುಂದಾಳತ್ವದಲ್ಲಿ ಶ್ರೀ ದೂದಪೀರ್ ಹುಸೇನ್ ಸಾಬ್ ಮುಲ್ಲಾ, ಪೊಲೀಸ್ ಉಪಾಧೀಕ್ಷಕರು ಬೀದರ, ರವರ ನೇತೃತ್ವದಲ್ಲಿ, ಶ್ರೀ ಮಹೇಶ ಗೌಡ ಪಾಟೀಲ್, ಪಿ.ಐ ಬೀದರ್ ಗ್ರಾಮೀಣ ಪೊಲೀಸ್ ಠಾಣೆ ರವರು ತಮ್ಮ ಠಾಣೆಯ ಶ್ರೀ ಸೂರ್ಯಕಾಂತ ಎ.ಎಸ್.ಐ, ಶ್ರೀ ಸಿದ್ದಯ್ಯ ಮತ್ತು ಶ್ರೀ ಶ್ರೀನಿವಾಸ ಹಾಗೂ ಶ್ರೀ ಸಂತೋಷ, ಬೀದರ್ ಡಿ.ಎಸ್.ಬಿ ಘಟಕದ ಸಂತೋಷ ಸಿ.ಪಿ.ಸಿ-2044 ರವರನ್ನು ಒಳಗೊಂಡ ತಂಡವು ದಾಳಿ ಮಾಡಿ 11 ಕೆ.ಜಿ 775 ಗ್ರಾಂ ಅ.ಕಿ. 5,88,750/- ರೂಪಾಯಿ ಮತ್ತು ಒಂದು ದ್ವಿಚಕ್ರ ವಾಹನ ಸೇರಿ 50,000/- ರೂಪಾಯಿ ಹೀಗೆ ಒಟ್ಟು 6,38,750/- ರೂಪಾಯಿ ಮೌಲ್ಯದ ಗಾಂಜಾ, ದ್ವಿಚಕ್ರ ವಾಹನ ವಶ ಪಡಿಸಿಕೊಂಡು ಇಬ್ಬರು ಆರೋಪಿತರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯನ್ನು ನಶಾ ಮುಕ್ತ ಜಿಲ್ಲೆಯನ್ನಾಗಿಸುವ ಸಂಕಲ್ಪ ಇಟ್ಟುಕೊಂಡು ಗಾಂಜಾ ದಾಳಿ ಮಾಡಿ 6 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಶ ವಶ ಪಡಿಸಲು ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ್ ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ್ ಗುಂಟಿ (ಐ.ಪಿ.ಎಸ್.) ರವರು ತಿಳಿಸಿದ್ದಾರೆ.
ವರದಿ: ರೋಹನ್




















