ಮರದಿ ತೂಗುತಿದ್ದ ಉದ್ದಕಾಯಿಗೆ ರಬ್ಬರ್ ಬ್ಯಾಂಡು ಸೇರಿಸಲು
ನಡುವಿಗೆ ಪೆನ್ಸಿಲ್ ಕವಚದ ಪುಡಿಯನು ತುಂಬಿಸಲು
ಬಾಯಿಬಿರಿದ ಗರಿಯ ಆಚೀಚೆ ಚಂದದಿ ಜೋಡಿಸಲು
ಪುಟ್ಟ ಪುಟ್ಟ ಎಲೆಗಳ ಬೊಟ್ಟಿನ ಜೊತೆ ಸಿಂಗರಿಸಲು
ನಲ್ಮುಂಜಾವಲಿ ಮೂಡಿತು ಸುಲಲಿತ ಚಿತ್ತಾರವು
ಕವಿ ಭಾವದಿ ಉಗಮಿಸಿತು ಲಘು ಕಾವ್ಯವು
ಸೃಜನಶೀಲ ಸುಮನಗಳಿಗಿಂದಿದು ಅರ್ಪಿತವು
ಪರಸ್ಪರ ಆಸ್ವಾದಿಸುತ ಮುನ್ನಡೆಯುವ ನಾವುನೀವು
- ಲಲಿತಾ ಕೆ ಆಚಾರ್, ಬೆಂಗಳೂರು




















