ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಾಲಿಂಗಪುರದಲ್ಲಿ ಜೂನ್ 24 ರಂದು ಬೃಹತ್ ರಸ್ತೆ ತಡೆ ಹಾಗೂ ಮಾನವ ಸರಪಳಿ ಪ್ರತಿಭಟನೆ: ವಿವಿಧ ಸಂಘಟನೆಗಳ ಬೆಂಬಲ

ಮಹಾಲಿಂಗಪುರ: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ‘ಶಬ್ದವೇದಿ ಯಲ್ಲಣ್ಣ ವಡ್ಡರ ವೃತ್ತ’ವನ್ನು ನಿರ್ಮಿಸಬೇಕೆಂದು ಆಗ್ರಹಿಸಿ ಜೂನ್ 24 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ಬೃಹತ್ ರಸ್ತೆ ತಡೆ ಚಳುವಳಿ ಹಾಗೂ ಮಾನವ ಸರಪಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

​ಈ ಕುರಿತು ಪ್ರತಿಭಟನಾ ಸಮಿತಿಯು ಮಹಾಲಿಂಗಪುರ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಅಧಿಕೃತ ಪತ್ರದ ಮೂಲಕ ಮನವಿ ಸಲ್ಲಿಸಿದೆ. ಕಳೆದ ಜೂನ್ 14 ರಂದು ವೃತ್ತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದ್ದು, ಈ ಹೋರಾಟದ ಭಾಗವಾಗಿ ಅಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರತಿಭಟನಾ ಮಾರ್ಗ:

ಪ್ರತಿಭಟನಾ ಮೆರವಣಿಗೆಯು ಅಂಬೇಡ್ಕರ್ ಸರ್ಕಲ್‌ನಿಂದ ಪ್ರಾರಂಭವಾಗಿ, ಗಾಂಧಿ ಸರ್ಕಲ್ ಮೂಲಕ ಚೆನ್ನಮ್ಮ ಸರ್ಕಲ್‌ಗೆ ತಲುಪಲಿದೆ. ಅಲ್ಲಿಂದ ನೇರವಾಗಿ ಶಬ್ದವೇದಿ ಯಲ್ಲಣ್ಣ ವಡ್ಡರ ಸರ್ಕಲ್‌ನಲ್ಲಿ ವೃತ್ತಾಕಾರದ ಮಾನವ ಸರಪಳಿ ನಿರ್ಮಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

ಈ ಪ್ರತಿಭಟನೆಯಲ್ಲಿ ಬೆಂಬಲ ನೀಡುವ ಸಂಘ-ಸಂಸ್ಥೆಗಳು

​ರೈತ ಸಂಘ, ಮಹಾಲಿಂಗಪುರ

​ಡಾ|| ಬಿ.ಆರ್. ಅಂಬೇಡ್ಕರ್ ಗ್ರಾಮೀಣ ಅಭಿವೃದ್ಧಿ ಸಂಘ, ಮಹಾಲಿಂಗಪುರ.

​ನೇಕಾರ ಸಂಘ, ಮಹಾಲಿಂಗಪುರ

​ಶಿವಸೇನಾ ಸಂಘಟನೆ ಮಹಾಲಿಂಗಪುರ

​ಕೂಲಿ ಕಾರ್ಮಿಕರ ಸಂಘ, ಮಹಾಲಿಂಗಪುರ

​ಅಸಂಘಟಿತ ದಿನಗೂಲಿ ಕಾರ್ಮಿಕರ ಸಂಘ, ಮಹಾಲಿಂಗಪುರ

​ವಿದ್ಯಾರ್ಥಿ ಸಂಘಟನೆಗಳು, ಮಹಾಲಿಂಗಪುರ

​ಸಾಮಾಜಿಕ ಚಿಂತಕರ ವೇದಿಕೆ, ಮಹಾಲಿಂಗಪುರ

​ವಿಕಲಚೇತನರ ಸಂಘ, ಮಹಾಲಿಂಗಪುರ

​ಸ್ವತಂತ್ರ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ವೇದಿಕೆ ಮುಖಂಡರು.

​ಕರ್ನಾಟಕ ರಾಜ್ಯ ಭೋವಿ (ವಡ್ಡರ) ಮಹಾಸಭಾ ರಾಜ್ಯ ವೇದಿಕೆ ಮುಖಂಡರು, ಬೆಂಗಳೂರು.

​ಕರ್ನಾಟಕ ಭೋವಿ (ವಡ್ಡರ) ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷರು ಗೌತಮ ವಂಕಿ ಆನೇಕಲ್ (ಬೆಂಗಳೂರು.)

​ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ಬೆಂಗಳೂರು.

​ಶ್ರೀ ಸಿದ್ರಾಮೇಶ್ವರ ಭೋವಿ (ವಡ್ಡರ) ಸಮಾಜ ಸೇವಾ ಸಂಘ, ಮಹಾಲಿಂಗಪುರ

​ಸರ್.ಎಮ್. ವಿಶ್ವೇಶ್ವರಯ್ಯ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ, ಮಹಾಲಿಂಗಪುರ

​ಚನ್ನದಾಸರ ಸಮಾಜ ಮಹಾಲಿಂಗಪುರ.

​ಮತ್ತು ಇತರೆ ಸ್ವ-ಇಚ್ಛಾ ಪ್ರತಿಭಟನಾ ಪ್ರಜೆಗಳು

ಅಧಿಕಾರಿಗಳ ಉಪಸ್ಥಿತಿಗೆ ಆಗ್ರಹ:

ಪ್ರತಿಭಟನಾ ಸ್ಥಳಕ್ಕೆ ರಬಕವಿ-ಬನಹಟ್ಟಿ ತಹಶೀಲ್ದಾರರು ಹಾಗೂ ಜಮಖಂಡಿ ಜಿಲ್ಲಾ ಉಪವಿಭಾಗಾಧಿಕಾರಿಗಳು (ಎ.ಸಿ) ಖುದ್ದಾಗಿ ಆಗಮಿಸಿ ತಮ್ಮ ಮನವಿಯನ್ನು ಸ್ವೀಕರಿಸಬೇಕು.
ಪುರಸಭೆ ಮುಖ್ಯಾಧಿಕಾರಿಗಳು ಈ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಸಾರ್ವಜನಿಕರ ಅಹವಾಲು ಆಲಿಸಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಪ್ರಮುಖವಾಗಿ ಒತ್ತಾಯಿಸಿದ್ದಾರೆ. ಮಹಲಿಂಗಪುರದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಮಟ್ಟದ ನಾಗರಿಕ ಹೋರಾಟವಾಗುವ ಸಾಧ್ಯತೆಯಿದೆ.

– ಕರುನಾಡ ಕಂದ ಸುದ್ದಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!