ಕೊಡಗು : ಮಡಿಕೇರಿ ಕ್ಷೇತ್ರದ ಯುವ ಶಾಸಕರಾದ ಡಾ. ಮಂತರ್ ಗೌಡ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಇಂದು ಭೇಟಿ ನೀಡಿದರು.
ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ವಿನೂತನ ಸೌಲಭ್ಯಗಳ ಮೇಲ್ದರ್ಜೆ ಹಾಗೂ ಉನ್ನತೀಕರಣದ ಸೌಲಭ್ಯವನ್ನು ಈ ಸಂದರ್ಭದಲ್ಲಿ ಉದ್ಘಾಟಿಸಿದರು.
ಈ ಸೌಲಭ್ಯಗಳಲ್ಲಿ ಬ್ಲಡ್ ಬ್ಯಾಂಕ್, ಕಿಮೋಥೆರಪಿ ವಾರ್ಡ್, ಕ್ಯಾನ್ಸರ್ ಹಾಗೂ ಏಕೋ ಕ್ಲಿನಿಕ್, ಮೋಡ್ಯೂಲರ್ ಕಿಚನ್ ಒಳಗೊಂಡಿವೆ.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ಬ್ಲಾಕ್ ಅಧ್ಯಕ್ಷರು ಕೊಟ್ಟಮುಡಿ ಹಂಸ, ವಲಯ ಅಧ್ಯಕ್ಷರು ಪ್ರಕಾಶ್ ಆಚಾರ್ಯ, ಜಿಲ್ಲಾ ಕಾಂಗ್ರೆಸ್ ವಕ್ತರರು ತೆನ್ನಿರ ಮೈನಾ, ಸೂರಜ್ ಹೊಸೂರು, ಇಸ್ಮಾಯಿಲ್, ರಾಜೇಶ್ ಎಲ್ಲಪ್ಪ, ಡಾ. ಲೋಕೇಶ್, ಡಾ. ಮೋಹನ್ ಅಪ್ಪಾಜಿ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ವರದಿ : ಪ್ರಿತುನ್ ಪೂವಣ್ಣ




















