ಬೆಂಗಳೂರು: ಇದೇ 11-7-2026, ಎರಡನೇ ಶನಿವಾರ ಬೆಳಗ್ಗೆ 10 ಗಂಟೆಗೆ ಆನಂದ ರಾವ್ ವೃತ್ತದ ಬಳಿ ಇರುವ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಲೇಖಕ ಶ್ರೀ ತಿಮ್ಮಣ್ಣ ಭಟ್ ಅವರಿಂದ ಮಂಕುತಿಮ್ಮನ ಕಗ್ಗದಲ್ಲಿ ಕೌಟುಂಬಿಕ ಮೌಲ್ಯಗಳು ಕುರಿತು ಉಪನ್ಯಾಸ,
ದಂತ ವೈದ್ಯೆ, ಡಾಕ್ಟರ್ ನಮೃತಾ ಉಮೇಶ್ ಅವರಿಂದ ಬಾಯಿಯ ಆರೋಗ್ಯ ಮತ್ತು ದೇಹದ ಆರೋಗ್ಯ: ಅವಿನಾಭಾವ ಸಂಬಂಧ ಕುರಿತು ಆರೋಗ್ಯ ಸಲಹೆ ಕಾರ್ಯಕ್ರಮ ಹಾಗೂ ವಿದೂಷಿ ಶ್ರುತಿ ಗೌಡ ಮೈಸೂರು ಇವರಿಂದ
ಸುಗಮ ಸಂಗೀತ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ವಿಶ್ವೇಶ್ವರ ಗಾಯತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















