ಕಳೆದ 48 ಗಂಟೆಗಳಲ್ಲಿ ಜಗತ್ತನ್ನು ಮತ್ತು ನಮ್ಮ ದೇಶವನ್ನು ನಡುಗಿಸಿರುವ ಪ್ರಮುಖ ಘಟನೆಗಳ ಸಾರಾಂಶ ಇಲ್ಲಿದೆ.
ಮುಂಗಾರು ಮಳೆಯ ಆರ್ಭಟಕ್ಕೆ ದೇಶದ ವಾಣಿಜ್ಯ ನಗರಿ ಮುಂಬೈ ಸಂಪೂರ್ಣ ತತ್ತರಿಸಿದೆ. ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಸ್ತೆಗಳು, ರೈಲ್ವೆ ಹಳಿಗಳು ಜಲಾವೃತಗೊಂಡಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಪ್ರವಾಹ ಪರಿಸ್ಥಿತಿಯಿಂದಾಗಿ ಈಗಾಗಲೇ ಕನಿಷ್ಠ 7 ಜನರು ಜೀವ ಕಳೆದುಕೊಂಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಇಂದು ಮುಂಬೈನ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಮುನ್ಸೂಚನೆ ನೀಡಿದೆ.
ವರದಿ ದಿನೇಶ್ ಕೆ




















