
ವಿಜಯಪುರ : ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಪಶು ಆಸ್ಪತ್ರೆ ವಿಜಯಪುರ ಹಾಗೂ ಸಹಾಯಕ ನಿರ್ದೇಶಕರು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಇವರ ಸಂಯುಕ್ತ ಆಶ್ರಯದೊಂದಿಗೆ ಜುಮನಾಳ ಗ್ರಾಮದಲ್ಲಿ ದಿನಾಂಕ: 16.7.2026 ರಂದು ಜಾನುವಾರುಗಳಿಗೆ ಚಿಕಿತ್ಸಾ ಶಿಬಿರ ಮತ್ತು ಕುರಿ ಮತ್ತು ಮೇಕೆಗಳಿಗೆ ಜಂತುನಾಶಕ ಔಷಧ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಜಾತಾ ಕಳ್ಳಿಮನಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಡಾ|| ಸುಜಾತಾ ಎಮ್. ಮುಖ್ಯ ಪಶುವೈದ್ಯಾಧಿಕಾರಿಗಳು ಪಶು ಆಸ್ಪತ್ರೆ ವಿಜಯಪುರ, ಡಾ|| ಪದ್ಮಾವತಿ ದೊಡಮನಿ ಸಹಾಯಕ ನಿರ್ದೇಶಕರು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ , ಡಾ|| ಬಾಳಾಸಾಬ . ಬಂಡಿ ಹಿರಿಯ ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ಈಶ್ವರ ಯರನಾಳ ಯಮನಪ್ಪ ಗಂಗನಳ್ಳಿ, ಬಸನಗೌಡ ಪಾಟೀಲ ಬಸವರಾಜ ಜುಮನಾಳ, ರಮೇಶ್ ವಗ್ಗರ್ ಮುಕ್ಕೆ ಅಧ್ಯಕ್ಷರು ಬಾಗಪ್ಪ ಬಿಸೆ ಶಿವಪ್ಪ ಪೂಜೇರಿ ನಿಂಗಪ್ಪ ಗರಸಂಗಿ,
ಬಾಬು ಭಜಂತ್ರಿ ಭಾಗವಹಿಸಿದ್ದರು.
ವರದಿ ಆನಂದ್ ಎಮ್. ಬಳ್ಳಾರಿ




















