ಬಳ್ಳಾರಿ : ಕಳೆದ 2002 ರ ಫೆ.6 ರಂದು ಕಾಣೆಯಾಗಿದ್ದ ನಗರದ ಬಿ. ರಾಜು ಎಂಬುವವರು ಪತ್ನಿ ಮತ್ತು ಮಗುವನ್ನು ಮಹಿಳಾ ಠಾಣೆಯ ಪೊಲೀಸರು ಪತ್ತೆಹಚ್ಚಿದ್ದಾರೆ.
ರಾಜು ನೀಡಿದ್ದ ದೂರನ್ನು ಪರಿಗಣಿಸಿ ಪೊಲೀಸರು
ತನಿಖೆ ಕೈಗೊಂಡಾಗ ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ಮಹಿಳೆ ಹಾಗೂ ಮಗುವನ್ನು ಪಿಐ ರಮೇಶ್ ಕುಲಕರ್ಣಿ ಮತ್ತವರ ತಂಡ ಪತ್ತೆ ಮಾಡಿದ್ದಾರೆ ಮಹಿಳೆ ಹಾಗೂ ಮಗುವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















