ಕಲಿಗಾಲ ವಾರಪತ್ರಿಕೆ ಬಳಗ ನಂಜನಗೂಡು ಇವರ ವತಿಯಿಂದ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಸಮಾರಂಭವನ್ನು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಸಮಾರಂಭದಲ್ಲಿದ್ದ ಮಾಜಿ ಶಾಸಕರು ಸೋಮಶೇಖರ್ ಪತ್ರಿಕಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.
ಸಮಾಜ ಸೇವೆ ಮಾಡಿದ ಹಲವಾರು ಗಣ್ಯರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕೃಷ್ಣಮೂರ್ತಿ ಶಾಸಕರು ಕೊಳ್ಳೇಗಾಲ, ಸೋಮಶೇಖರ್ ಮಾಜಿ ಶಾಸಕರು ಮಳವಳ್ಳಿ, ಡಾಕ್ಟರ್ ಅಬ್ದುಲ್ ಶುಕುರ್ ಗುರುಗಳು ಸಮಾಜ ಸೇವಕರು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರು ಹಾಜರಿದ್ದರು. ನಿರೂಪಣೆ ನಂದಿನಿ, ಪ್ರಾರ್ಥನೆ ಸತ್ಯನಾರಾಯಣ ಪ್ರಸಾದ್, ಸ್ವಾಗತ ಶೇಖರ್ ಮುಳ್ಳೂರು ನಿರ್ವಹಿಸಿದರು.




















