ಮೈಸೂರು ಜಿಲ್ಲೆಯ ರೋಟರಿ ನಂಜನಗೂಡು ಡಾಕ್ಟರ್ ಕೃಷ್ಣದಾಸ್ ಸ್ಮಾರಕ ಆಯುರ್ವೇದ ಚಿಕಿತ್ಸಾಲಯ, ಆಯುರ್ ನವ್ಯ ಪಂಚಕರ್ಮ ಸೆಂಟರ್ ನಂಜನಗೂಡು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುರ್ವೇದ ತಪಾಸಣೆ ಶಿಬಿರವನ್ನು ನಾಗಮ್ಮ ಶಾಲೆ ಆರ್‌ಪಿ ರಸ್ತೆ ನಂಜನಗೂಡಿನಲ್ಲಿ ಏರ್ಪಡಿಸಲಾಯಿತು.
ಶಿಬಿರದಲ್ಲಿ ಬೆನ್ನು ನೋವು, ಸೊಂಟ ನೋವು, ಮೊಳಕಾಲು ನೋವು, ಕುತ್ತಿಗೆ ನೋವು, ಮಧುಮೇಹ, ರಕ್ತದೊತ್ತಡ, ಬಲಹೀನತೆ ಮುಂತಾದ ರೋಗಗಳ ತಪಾಸಣೆ ಮತ್ತು ಔಷಧಿಗಳನ್ನು ಉಚಿತವಾಗಿ ನಡೆಸಿ ವಿತರಿಸಲಾಯಿತು.
ಶಿಬಿರದಲ್ಲಿ ಸುಮಾರು 250 ರೋಗಿಗಳು ಉಪಯೋಗವನ್ನು ಪಡೆದುಕೊಂಡರು.
ಶಿಬಿರದಲ್ಲಿ ಡಾಕ್ಟರ್ ಚಂದ್ರಶೇಖರ್, ಡಾಕ್ಟರ್ ಸದಾನಂದ ಪರಂ ಗೊಂಡೆ, ಡಾ. ಗುರುಬಸವರಾಜು, ಪ್ರಶಾಂತ, ನಮ್ರತಾ, ಗಣೇಶ್ ಪ್ರಸಾದ್ ಭಾಗವಹಿಸಿದ್ದರು.




















