ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮಾತಿನ ಮನೆಯಲ್ಲಿ ಅಶ್ವತ್ಥ-ಅನಂತ-ಕಾಳಿಂಗ ಶೀರ್ಷಿಕೆಯಲ್ಲಿ ಗೀತ ಸಂಗೀತ ಜಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕನ್ನಡ ಭಾವಗೀತೆಗಳ ಮರೆಯಲಾಗದ ಈ ಗಾಯಕ/ ಸಂಗೀತ ಸಂಯೋಜಕರ ಹಾಡುಗಳನ್ನು ನೊಬಲ್ ಆರ್ಟ್ಸ್ ನ ಕಲಾವಿದರು ೯೦ ನಿಮಿಷಗಳ ಕಾಲ ಹಾಡಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಭಾವಮುಗ್ಧರಾಗಿ ಕೇಳುವಂತೆ ಮಾಡಿದ್ದರು.
ವಿಶೇಷ ಆತಥಿಯಾಗಿ ಆಗಮಿಸಿದ್ದ ಪಿ. ಕಾಳಿಂಗರಾಯರ ಪುತ್ರ ಶರತ್ ಪಿ. ಕಾಳಿಂಗರಾವ್ ಕಾರ್ಯಕ್ರಮಕ್ಕೆ ಮೆಚ್ಚುಗೆ ಸೂಚಿಸಿ ಪ್ರೇಕ್ಷಕರ ಕೋರಿಕೆಯಂತೆ “ಅಂತಿಂಥ ಹೆಣ್ಣು ನೀನಲ್ಲ, ನಿನ್ನಂತ ಹೆಣ್ಣು ಯಾರು ಇಲ್ಲ” ಹಾಡಿದ್ದರು.
ಶರತ್ ಪಿ ಕಾಳಿಂಗ ರಾವ್ ಅವರನ್ನು ಮಾತಿನ ಮನೆ ಮತ್ತು ನೋಬಲ್ ಆರ್ಟ್ಸ್ ಪರವಾಗಿ ರಾ ಸು ವೆಂಕಟೇಶ ಮತ್ತು ಸತ್ಯಪ್ರಸಾದ್ ಗೌರವಿಸಿದ್ದರು. ವೇದಿಕೆಯ ಕಲಾವಿದರುಗಳಾದ ಎ ಎಸ್ ಮಧುಸೂದನ್, ಎ ಎಸ್ ಮೋಹನ್, ಕು.ಭೂಮಿಕಾ, ವಿದ್ಯಾ ವಿಕ್ರಂ, ರಾಧಾ ಕೇಶವ ಹೆಬ್ಬಾರ್, ಸಹನಾ ರಾಜೇಶ್ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















