ಪಾವಗಡ ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾಗಿ ಮರು ಆಯ್ಕೆಯಾದ ಪೆದ್ದನ್ನ ರವರಿಗೆ ಪಾವಗಡ ತಾಲೂಕಿನ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಸನ್ಮಾನ ಮಾಡಲಾಯಿತು.
ಪಾವಗಡ ತಾಲೂಕಿನ ಬಳಸಮುದ್ರ ಗ್ರಾಮದ ಪೆದ್ದನ್ನನವರು ಕಳೆದ 30 ವರ್ಷಗಳಿಂದ ದಲಿತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇದ್ದು ಪಾವಗಡ ತಾಲೂಕಿನ ದಲಿತರಿಗೆ ಮತ್ತು ಬಡವರ ಪರ ಧ್ವನಿ ಎತ್ತಿ ದಲಿತರ ಹಕ್ಕುಗಳಿಗಾಗಿ ಹೋರಾಟ ಮಾಡಿದಂತ ಧೀಮಂತ ವ್ಯಕ್ತಿ ಪೆದ್ದನ್ನನವರು,
ಪೆದ್ದನ್ನನವರು ಈ ಹಿಂದೆಯೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿ ಕೆಲಸ ಮಾಡಿದ್ದು ಅವರ ಕೆಲಸ ಕಾರ್ಯಗಳನ್ನು ರಾಜ್ಯ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಾಯಕರು ಗುರುತಿಸಿ ಗೌರವಿಸಿ ಮತ್ತೊಮ್ಮೆ ಪೆದ್ದನ್ನರನ್ನು ಪಾವಗಡ ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿ ಪುನರ್ ಅಯ್ಕೆ ಮಾಡಿದ್ದಾರೆ ಆದ್ದರಿಂದ ಇಂದು ಪಾವಗಡ ತಾಲೂಕಿನ ನಿರೀಕ್ಷಣಾ ಮಂದಿರದಲ್ಲಿ ಪಾವಗಡ ತಾಲೂಕಿನ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಾವಗಡ ತಾಲೂಕಿನ ಕರ್ನಾಟಕ ಮಾದರ ಮಹಾ ಸಭಾ ಸಂಘದ ಅಧ್ಯಕ್ಷರಾದ ಕತೀಕ್ಯಾತನಹಳ್ಳಿ ನರಸಿಂಹಪ್ಪ ನವರು, ಮಾದಿಗ ದಂಡೋರ ಜಿಲ್ಲಾ ಉಪಾಧ್ಯಕ್ಷರಾದ ವಳ್ಳುರು ನಾಗೇಶ್, ಮಾದಿಗ ದಂಡೋರ ತಾಲ್ಲೂಕು ಸಂಚಾಲಕ ಹನುಮಂತ ರಾಯಪ್ಪ, BSP ಜಿಲ್ಲಾ ಕಾರ್ಯದರ್ಶಿ ಟಿ. ಹನುಮಂತರಾಯ, ಹೊಸಹಳ್ಳಿ ಮಲ್ಲಿಕಾರ್ಜುನ DSS, ತಾಲ್ಲೂಕು ಸಂಚಾಲಕರು ಹಾಗೂ ಕಡಪಲಕರೆ ನರಸಿಂಹಪ್ಪ HRFDL , ರಾಮಪ್ಪ ಟಿ ಎನ್ ಪೇಟೆ, ಮಾದಿಗ ದಂಡೋರ ತಾಲ್ಲೂಕು ಉಪಾಧ್ಯಕ್ಷರು, ಪಳವಳ್ಳಿ ಗಂಗಾಧರ, ಕೋತ್ತುರು ಕರಿಬಸಪ್ಪ DSS ತಾಲ್ಲೂಕು ಖಜಾಂಚಿ ಹಾಗೂ ಟಿ ಎನ್ ಪೇಟೆ ನರಸಿಂಹಪ್ಪ ಹಿರಿಯ ಮುಖಂಡರು ಮಲ್ಲೆಶಪ್ಪ ಹಾಗೂ CK ತಿಪ್ಪೇಸ್ವಾಮಿ ಜಿಲ್ಲಾ ಸಂಘಟನಾ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ ತುಮಕೂರು ಮತ್ತು ತಾಲ್ಲೂಕಿನ ಅನೇಕ ದಲಿತ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.




















