ಬಳ್ಳಾರಿ / ಕಂಪ್ಲಿ : ತಾಲೂಕಿನ ದೇವಲಾಪುರ ಗ್ರಾಮದ ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಿರಿಯ ಬಡ್ತಿ ಮುಖ್ಯಶಿಕ್ಷಕಿ ಚನ್ನಬಸಮ್ಮ ಅವರ ವಯೋ ನಿವೃತ್ತಿ ಹಿನ್ನಲೆ ಅವರಿಗೆ ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸುವ ಮೂಲಕ ಶುಕ್ರವಾರ ಬೀಳ್ಕೊಡಲಾಯಿತು.
ಮುಖ್ಯಗುರು ಎಚ್.ಪಿ.ಸೋಮಶೇಖರ ಮಾತನಾಡಿ, ಸರ್ಕಾರಿ ಕೆಲಸ ದೇವರ ಕೆಲಸ ಎಂಬಂತೆ ಸರ್ಕಾರಿ ಹುದ್ದೆ ಅಲಂಕರಿಸಿದ ದಿನದಿಂದಲೂ ಮಕ್ಕಳ ಮತ್ತು ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಕಳೆದ 39 ವರ್ಷ ಸತತ ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಮುಂದಿನ ವಯೋ ನಿವೃತ್ತಿ ಜೀವನವೂ ಸದಾ ಆರೋಗ್ಯ, ಸಮೃದ್ಧಿಯಿಂದ ಕೂಡಿರಲಿ ಎಂದರು.
ನಂತರ ವಯೋ ನಿವೃತ್ತಿ ಹೊಂದಿದ ಬಡ್ತಿ ಮುಖ್ಯಶಿಕ್ಷಕಿ ಚನ್ನಬಸಮ್ಮ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಕ್ಕಳೊಂದಿಗೆ ಹಲವು ವರ್ಷ ಕಳೆದಿರುವೆ. ಮಕ್ಕಳು ಭವಿಷ್ಯ ಶಿಕ್ಷಣದಲ್ಲಿ ಅಡಗಿದ್ದು, ಅವರ ಏಳಿಗೆ ಮತ್ತು ಕಲಿಕೆಗಾಗಿ ದಿನನಿತ್ಯದಲ್ಲಿ ಶ್ರಮಿಸಲಾಗುತ್ತಿತ್ತು. ಈಗ ಅನಿವಾರ್ಯವಾಗಿ ವಯೋ ನಿವೃತ್ತಿ ಹೊಂದಿ, ಹೊಸಬರಿಗೆ ಅವಕಾಶ ಮಾಡಿಕೊಡಬೇಕಾಗಿದೆ. ಇಲ್ಲಿತನ ನಮ್ಮ ಜೊತೆಗೂಡಿ ಕೆಲಸಕ್ಕೆ ಸಹಕರಿಸಿ, ತಮಗೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ತದ ನಂತರ ವಯೋ ನಿವೃತ್ತಿ ಹೊಂದಿದ ಬಡ್ತಿ ಮುಖ್ಯಶಿಕ್ಷಕಿ ಚನ್ನಬಸಮ್ಮ ಇವರಿಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯಗುರುಗಳು, ಶಿಕ್ಷಕ ವೃಂದದರು, ಸಂಘ-ಸಂಸ್ಥೆಯವರು, ಪೋಷಕರು ಸನ್ಮಾನಿಸಿ ವಿಜೃಂಭಣೆಯಿಂದ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯ ಕೆ.ಶಿವುಕುಮಾರ, ಸೊಸೈಟಿ ಅಧ್ಯಕ್ಷ ಗೊರವರ ಹನುಮಂತಪ್ಪ, ಪ್ರೌಢಶಾಲಾ ಮುಖ್ಯಗುರು ನಂದಕಿಶೋರ್, ಎಸ್ಡಿಎಂಸಿ ಅಧ್ಯಕ್ಷ ಶಿವರಾಜ್ ಕುಮಾರ, ದೇವರಮನೆ ಪಂಪಯ್ಯ, ಸದಸ್ಯರಾದ ಸಿ.ಡಿ.ಗಾದೆಪ್ಪ, ಲಿಗಾಡಿ ತಿಪ್ಪಯ್ಯ, ಎಚ್.ಕಾಮಾಕ್ಷಿ, ಬಿ.ನಾಗೇಶ್ವರಿ, ಗೊರವರ ಲಕ್ಷಿö, ಹೊಸನಗರ ಶಾಲೆ ಮುಖ್ಯಗುರು ಪ್ರಕಾಶ್, ಎಸ್ಡಿಎಂಸಿ ಅಧ್ಯಕ್ಷ ಭಾವಿಕಟ್ಟೆ ಹೊನ್ನೂರಸ್ವಾಮಿ, ಮುಖಂಡರಾದ ಗೌಡ್ರು ಅಂಜಿನಪ್ಪ, ಉಮೇಶಗೌಡ, ಸುರೇಶಗೌಡ, ಗೌಡ್ರು ಷಣ್ಮುಕ, ಪೂಜಾರಿ ರಮೇಶ, ಕುಂಬಾರ ವಿರುಪಾಕ್ಷಿ, ಬೂದಾಳ್ ರವಿ, ಬಳ್ಳಾರಿ ರಮೇಶ, ದೇವರ ಮನೆ ಮಲ್ಲಿಕಾರ್ಜುನ, ಎನ್.ನಾಗರಾಜ, ಕೆ.ಕರಿಬಸಪ್ಪ, ಟಿ.ಎನ್.ಆರ್.ರಮೇಶ, ಎನ್.ನಾಗರಾಜ, ಸಂಗ್ಟಿ ಅಂಜಿನಪ್ಪ, ಗೌಡ್ರು ವೆಂಕಟೇಶ, ರಾಜ, ಜಗದೀಶ ಸೇರಿದಂತೆ ಮುಖ್ಯಗುರುಗಳು, ಶಿಕ್ಷಕರು, ಪೋಷಕರು, ಮುಖಂಡರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















