ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಡಾ: ಭೀಮರಾವ್ ಅಂಬೇಡ್ಕರ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ.) ವತಿಯಿಂದ ನಿರ್ಗತಿಕರಿಗೆ, ಅಂಗವಿಕಲರಿಗೆ ಆಹಾರ ದಿನಸಿ ಕಿಟ್ ಮತ್ತು ಹೊದಿಕೆ ವಿತರಣೆ

ಬಳ್ಳಾರಿ / ಕಂಪ್ಲಿ :ನಮ್ಮ ನಡುವೆ ಇರುವ ನಿರ್ಗತಿಕರು ಮತ್ತು ಅಂಗವಿಕಲರು (ದಿವ್ಯಾಂಗರು) ಕೇವಲ ನಮ್ಮ ಅನುಕಂಪವನ್ನು ಬಯಸುವುದಿಲ್ಲ; ಅವರು ಗೌರವ, ಸಮಾನ ಅವಕಾಶ ಮತ್ತು ಬದುಕಲು ಒಂದು ಆಸರೆಯನ್ನು ಬಯಸುತ್ತಾರೆಂದು ಡಾ: ಭೀಮರಾವ್ ಅಂಬೇಡ್ಕರ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ.) ಸಂಸ್ಥಾಪಕ, ಅಧ್ಯಕ್ಷ ಹಾಗೂ ಆರಾಧ್ಯ ಭೂಮಿ ಪತ್ರಿಕೆ ಸಂಪಾದಕ ರವಿ ಮಣ್ಣೂರ್ ಹೇಳಿದರು.
ಡಾ: ಭೀಮರಾವ್ ಅಂಬೇಡ್ಕರ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ.) ಹಾಗೂ ಆರಾಧ್ಯ ಭೂಮಿ ಪತ್ರಿಕೆ ವತಿಯಿಂದ 80 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಂಪ್ಲಿ ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶದ ನಿರ್ಗತಿಕರಿಗೆ, ಅಂಗವಿಕಲರಿಗೆ ಆಹಾರ ದಿನಸಿ ಕಿಟ್ ಮತ್ತು ಹೊದಿಕೆಗಳನ್ನು ಶನಿವಾರ ವಿತರಿಸಿ ಮಾತನಾಡಿದ ಅವರು
ಮಹಾತ್ಮ ಗಾಂಧೀಜಿ, ಡಾ: ಬಿ ಆರ್ ಅಂಬೇಡ್ಕರ್ ಅವರು ಹೇಳಿದಂತೆ, “ಅತ್ಯಂತ ಹಿಂದುಳಿದ ವ್ಯಕ್ತಿಯ ಕಣ್ಣೀರನ್ನು ಒರೆಸುವುದೇ ನಿಜವಾದ ದೇಶಸೇವೆ.” ಎಂದರು.
ನಂತರ ಡಾ: ಭೀಮರಾವ್ ಅಂಬೇಡ್ಕರ್ ಚಾರಿಟೇಬಲ್ ಸೇವಾ ಟ್ರಸ್ಟ್ ಕಾರ್ಯದರ್ಶಿ ರೇಣುಕಾ ಕಾಳಿ ಮಾತನಾಡಿ ನಿರ್ಗತಿಕರಿಗೆ ಕನಿಷ್ಠ ಆಹಾರ, ವಸತಿ ಮತ್ತು ಬಟ್ಟೆಯ ಕೊರತೆ ಇರುತ್ತದೆ. ಸಾಮಾಜಿಕ ಕಡೆಗಣನೆ ಅಂಗವಿಕಲರನ್ನು ಅನೇಕ ಬಾರಿ ಸಮಾಜದ ಮುಖ್ಯವಾಹಿನಿಯಿಂದ ದೂರ ಇಡಲಾಗುತ್ತದೆ. ಸಹಾಯದ ಹಸ್ತ ಅವರಿಗೆ ಕೇವಲ ದಾನ ನೀಡುವುದು ಮುಖ್ಯವಲ್ಲ, ಅವರ ಕಾಲಿನ ಮೇಲೆ ಅವರು ನಿಲ್ಲುವಂತೆ ಮಾಡುವುದು ನಮ್ಮ ಕರ್ತವ್ಯ ಚಾರಿಟೇಬಲ್ ಟ್ರಸ್ಟ್‌ಗಳ ಮಹತ್ವದ ಪಾತ್ರಸರ್ಕಾರದ ಯೋಜನೆಗಳ ಜೊತೆಗೆ, ಚಾರಿಟೇಬಲ್ ಟ್ರಸ್ಟ್‌ಗಳು ಸಮಾಜದ ಈ ವರ್ಗಕ್ಕೆ ಬೆಳಕಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಸಮಾಜ ಸೇವಕ ಗೌಳೆರ್ ಪಂಪಾಪತಿ ಮಾತನಾಡಿ
ದಾನಂ ಪ್ರಧಾನಂ ಎನ್ನುತ್ತಾರೆ ಅಂಗವೈಕಲ್ಯ ಇರುವುದು ದೇಹಕ್ಕೇ ಹೊರತು ಆತ್ಮಕ್ಕಲ್ಲ. ನಿರ್ಗತಿಕರಿಗೆ ಕೊಡುವ ಒಂದು ತುತ್ತು ಅನ್ನ, ಅಂಗವಿಕಲರಿಗೆ ನೀಡುವ ಒಂದು ಸಣ್ಣ ಪ್ರೋತ್ಸಾಹ ಅವರ ಜೀವನವನ್ನೇ ಬದಲಾಯಿಸಬಹುದು.ಮೂಲಸೌಕರ್ಯ,ವೃದ್ಧಾಶ್ರಮಳು, ಅನಾಥಾಲಯಗಳು ಮತ್ತು ಪುನರ್ವಸತಿ ಕೇಂದ್ರಗಳನ್ನು ನಡೆಸುವುದು. ಶಿಕ್ಷಣ ಮತ್ತು ಆರೋಗ್ಯ,ಉಚಿತ ವೈದ್ಯಕೀಯ ಶಿಬಿರಗಳು ಮತ್ತು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು. ಉದ್ಯೋಗ ತರಬೇತಿ ಅಂಗವಿಕಲರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈ ಸಂಸ್ಥೆ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದು ಮೆಚ್ಚುವಂಥದ್ದು ಎಂದರು.

ವೀರಶೈವ ಮುಖಂಡ ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ ಮುಕಯ್ಯ ಸ್ವಾಮಿ ಹಾಗೂ ದಲಿತ ಹಿರಿಯ ಮುಖಂಡ ಜಿ ರಾಮಣ್ಣ ಅಂಗವಿಕಲನಿಗೆ ದಿನಸಿ ಕಿಟ್ ಹಾಗೂ ಹೊದಿಕೆ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖಂಡರಾದ ಬಿ ನಾರಾಯಣಪ್ಪ, ಮೆಟ್ರಿ ಗಂಗಾಧರ ಗೌಡ, ಬಿ. ದೇವೇಂದ್ರ ಪುಟಾಣಿ ಅಂಜಿನಪ್ಪ, ಸಮಾಜಸೇವಕ ಸಣ್ಣೆಪ್ಪ ತಳವಾರ್, ಇಸ್ಮಾಯಿಲ್, ಟ್ರಸ್ಟ್ ಖಜಾಂಚಿ ಕೆ ಪ್ರಶಾಂತ್, ಸಿ.ಎಸ್ ವಸಂತ ರವಿಚಂದ್ರ, ಬಾವಿಕಟ್ಟೆ ಗಣೇಶ್, ಆಕಾಶ್, ಸಿ ಅದ್ವಿಕ್, ಸಿ ಆರಾಧ್ಯ ಸೇರಿದಂತೆ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!