
ಚಿತ್ರದುರ್ಗ : ಜಿಲ್ಲೆ ಹೊಸದುರ್ಗ ನಗರದ ತಾಲೂಕು ಪಂಚಾಯಿತಿಯಲ್ಲಿ ಸುಮಾರು 19 ವರ್ಷಗಳಿಂದ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಫಯಾಜ್ ಅಹ್ಮದ್ ಬಿನ್ ಕಲಂದರ್ಸಾಬ್ ಎಂ ಆರ್ ಡಬ್ಲ್ಯೂ ಇವರಿಗೆ ಸರ್ಕಾರಿ ಸೇವೆ ಹಾಗೂ ಸಮಾಜ ಸೇವೆಗಳಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 80ನೇ ಸ್ವಾತಂತ್ರ್ಯ ದಿನೋತ್ಸವದಂದು ಸ್ಮರಣ ಸಂಚಿಕೆ ಹಾಗೂ ಗೌರವಸಮರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಬಿ ಜಿ ಗೋವಿಂದಪ್ಪ ನವರು ತಹಸೀಲ್ದಾರ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿಗಳು, ಗ್ಯಾರೆಂಟಿ ಯೋಜನೆಯ ಅಧ್ಯಕ್ಷರಾದ ಸ್ಮೈಲ್ ಮುಂತಾದವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಬಗೆಯ ವಿಶೇಷ ಚೇತನರಿಗೆ ಒಂದು ಲಕ್ಷ ರೂಪಾಯಿ ಮುಖಬೆಲೆಯ ಪವರ್ ವೀಲ್ ಚೇರ್ ಹೊಲಿಗೆ ಯಂತ್ರಗಳು ಟಾಕಿಂಗ್ ಲ್ಯಾಪ್ ಟಾಪ್ ಬ್ರೈಲ್ ಗಳನ್ನು ವಿತರಿಸಲಾಯಿತು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















