ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೂಡಿಗೆ ಗ್ರಾಮ ಪಂಚಾಯಿತಿ ಕಛೇರಿ ಮುಂದೆ ಬೀದಿ ನಾಯಿಗಳ ಹಾವಳಿ ಮಿತಿಮೀರಿರುದರಿಂದ ಕರವೇ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಕುಶಾಲನಗರ: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದೆ ಎಂದು ಆರೋಪಿಸಿ ಕೂಡಿಗೆ ಗ್ರಾ. ಪಂ. ಮುಂಭಾಗ ಪ್ರತಿಭಟನೆ ನಡೆಯಿತು.

ಗ್ರಾಮದ ಸಾರ್ವಜನಿಕರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗ್ರಾಪಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೀದಿ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಬೀದಿ ನಾಯಿಗಳಿಂದ ಸಾರ್ವಜನಿಕರನ್ನು ರಕ್ಷಿಸಬೇಕಿದೆ, ನಾಯಿಗಳ ಹಾವಳಿ ನಿಯಂತ್ರಿಸಬೇಕಿದೆ ಎಂದು ಆಗ್ರಹಿಸಿ ಘೋಷಣೆ ಕೂಗಲಾಯಿತು.

ಕೂಡಿಗೇ ಕೊಪ್ಪಲು ಗ್ರಾಮದ ರಂಗಣ್ಣ ಅವರ ಮೇಲೆ ದಾಳಿ ನಡೆಸಿದ ನಾಯಿಗಳ ಮಾರಣಾಂತಿಕವಾಗಿ ಫಾಸಿಗೊಳಿಸಿದೆ. ಜಾನುವಾರಗಳ ಮೇಲೂ ಬೀದಿ ನಾಯಿಗಳ ದಾಳಿನಡೆಸುತ್ತಿವೆ. ಪ್ರತಿಭಟನೆ ಬಗ್ಗೆ ಸೂಚನೆಯಿದ್ದರೂ ಕೂಡ ಪಿಡಿಒ ರಜೆ ಪಡೆದಿರುವುದು ಸಮಂಜಸವಲ್ಲ ಎಂದು ಪ್ರತಿಭಟನಾಕಾರರು, ಮನವಿ ಸ್ವೀಕರಿಸಲು ಮುಂದಾಗದಿರುವ ಅಧಿಕಾರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಹಲವು ಬಾರಿ ನಾಯಿಗಳ ಹಾವಳಿ ಬಗ್ಗೆ ಎಚ್ಚರಿಸಿದ್ದರೂ ಕೂಡ ಸೂಕ್ತ ಕ್ರಮಕೈಗೊಂಡಿಲ್ಲ. ನಾಯಿ ದಾಳಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ದೂರು ನೀಡಬೇಕಾಗುತ್ತದೆ.
ಗಾಯಾಳು ಚಿಕಿತ್ಸೆಗೆ ಪಂಚಾಯ್ತಿಯಿಂದ ಕ್ರಮ ವಹಿಸಬೇಕಿದೆ ಎಂದು
ಟಿ.ಎ.ನಾರಾಯಣ ಗೌಡರ ಕರವೇ ಜಿಲ್ಲಾ
ಸಂಚಾಲಕ ಗೋವಿಂದ ರಾಜ್ ದಾಸ್, ತಾಲೂಕು
ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರವೇ ತಾಲೂಕು
ಉಪಾಧ್ಯಕ್ಷ ಫಯಾಜುದ್ದೀನ್, ಪ್ರಧಾನ
ಕಾರ್ಯದರ್ಶಿಗಳಾದ ಕುಮಾರ್ ಆರ್.ದೇವಾಂಗ,
ಗೀತಾ, ಕಲ್ಪನಾ, ಖಜಾಂಚಿ ರೊನಾಲ್ಡ್
ಹೆಚ್.ಶಿವರಾಮೇಗೌಡರ ಕರವೇ ತಾಲೂಕು ಅಧ್ಯಕ್ಷ
ನಾಗರಾಜು, ಗೌರವಾಧ್ಯಕ್ಷೆ ಪುಟ್ಟಮ್ಮ
ಕಮಾಲುದ್ದೀನ್, ಗ್ರಾಮಸ್ಥರಾದ ವರದಿಗಾರ ಕೆ.ಆರ್.ಗಣೇಶ್,
ಮೋಹನ್ ಹಕ್ಕೆ ಅರುಣ್ ರಾವ್, ಬಿ.ಡಿ.ಅಣ್ಣಯ್ಯ,
ಅನಂತ್, ಶಿವಕುಮಾರ್, ಸೋಮಣ್ಣ ಚಂದು,
ಸುಬ್ಬಯ್ಯ, ನಾಗರಾಜು, ರಜಾಕ್, ಇಸ್ಮಾಯಿಲ್,
ರಂಗ, ಧರ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!