ಕಾಳಗಿ ತಾಲೂಕಿನ ಹೊಸಳ್ಳಿ ಕ್ರಾಸ್ ಹತ್ತಿರ ಎಲ್ಲಾ ಬಸ್ಸುಗಳನ್ನು ನಿಲ್ಲಿಸುವಂತೆ ದಲಿತ ಸೇನೆ ವತಿಯಿಂದ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಹೊಸಳ್ಳಿ ಕ್ರಾಸ್ ನಲ್ಲಿ ಬಸ್ ನಿಲ್ಲಿಸದೆ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕಾಳಗಿ, ಚಿಂಚೋಳಿ ಹಾಗೂ ಕಲಬುರಗಿಗೆ ಹೋಗುವ ಜನರಿಗೆ ಬಹಳ ತೊಂದರೆಯಾಗುತ್ತಿದೆ. ಹೊಸಳ್ಳಿ ಕ್ರಾಸ್ ಗೆ ಹೈಮಾಸ್ಕ್ ರಿಪೇರಿ ಹಾಗೂ ಹಲಚೇರಾ ಗ್ರಾಮ ಪಂಚಾಯತ ಕಟ್ಟಡವು ಹಳೆಯ ಕಟ್ಟಡವಾಗಿದ್ದು, ಹೊಸ ಕಟ್ಟದ ಮಾಡಬೇಕು. ಬೀರನಳ್ಳಿ ಪಂಚಾಯತಗೆ ಬರುವ ಕುಡಹಳ್ಳಿ, ಕೊರವಿ ಗ್ರಾಮಸ್ಥರಿಗೆ ಕೂಲಿಕಾರ್ಮಿಕರಿಗೆ ಕೆಲಸ ನೀಡಬೇಕು.
ರಟಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹುಲಸಗೂಡ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ದಲಿತ ಯುವತಿ ಅಶ್ವಿನಿ ತಂದೆ ತಿಮ್ಮರಡ್ಡಿ ಎಂಬ ಯುವತಿ ಮೇಲೆ ಅತ್ಯಾಚಾರ ಕೊಲೆ ಮಾಡಿ ಬಾವಿಯಲ್ಲಿ ಎಸೆದು ಹೋದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ತಕ್ಕ ಶಿಕ್ಷೆಗೆ ಒಳಪಡಿಸಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ತಾಲೂಕು ಗೌರವಾಧ್ಯಕ್ಷ ಜೈಭೀಮ ಹೋಳಕರ್, ಅಧ್ಯಕ್ಷ ಖತಲಪ್ಪ ಅಂಕನ, ಕಾರ್ಯಾಧ್ಯಕ್ಷ ಮಾರುತಿ ತೇಗಲತಿಪ್ಪಿ, ಯುವ ಘಟಕ ಅಧ್ಯಕ್ಷ ರಮೇಶ ಕುಡಹಳ್ಳಿ, ಚಿಂಚೋಳಿ ಅಧ್ಯಕ್ಷರು ರಾಘವೇಂದ್ರ ಹೂವಿನಬಾವಿ, ರಾಮಚಂದ್ರ ಹೊಸಳ್ಳಿ, ನಗರ ಘಟಕ ಅಧ್ಯಕ್ಷರು ಖಾಲಿದ್ ಖುರೇಶಿ,ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷರು ಅನಿಲ ಗಂಜಗಿರಿ ಉಪಾಧ್ಯಕ್ಷರು ಹಣಮಂತ ಸಾಲಹಳ್ಳಿ, ಆಕಾಶ ಹೆಬ್ಬಾಳ, ಸಂತೋಷ ಮಳಗಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯರು,ತುಕಾರಾಮ ಗಂಜಗಿರಿ, ವಿರೇಶ ಕುಡ್ಡಳ್ಳಿ,ಹಣಮಂತ ಸಂಗನ, , ಇಸ್ಮಾಯಿಲ್ ಶ್ರೀಕಾಂತ್, ದಶರಥ, ಬಸ್ಸು, ಬೀರಪ್ಪ ಪೂಜಾರಿ, ಧನರಾಜ್ ನಾಟಿಕಾರ್, ಖತಲಪ್ಪ ಮಳಗಿ, ಸಂತೋಷ ಕೊರವಿ ಪ್ರಕಾಶ್ ಕೊರವಿ, ನಾಗು ಮನಕಾರ್, ಮಲ್ಲು ಮಲ್ಲು, ಸುಧಾಕರ್ ಸೇರಿದಂತೆ ಅನೇಕರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















