ಗಂಗಾವತಿ : ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ (ರಿ.), ಕೊಪ್ಪಳ ಜಿಲ್ಲಾ ಯುವ ಘಟಕ ಹಾಗೂ ಜಿಲ್ಲೆಯ ಎಲ್ಲಾ ತಾಲೂಕ ಯುವ ಘಟಕ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಆಗಸ್ಟ್ 28 (ಶುಕ್ರವಾರ) ರಂದು ಸಂಜೆ 05:00 ಗಂಟೆಗೆ ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಯಲ್ಲಿ ಆಯೋಜಿಸಲಾಗಿದೆ.
ಈ ಆಯ್ಕೆ ಸಭೆಯಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷರಾದ ಟಿ.ಆರ್. ತುಳಸಿರಾಮ್ ಅವರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಬೆಟ್ಟಪ್ಪ ಕಾಟಾಪುರ ಅವರು ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.
ಸಮುದಾಯದ ಯುವಕರನ್ನು ಸಂಘಟಿಸುವ ಹಾಗೂ ಯುವ ಘಟಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಆಯ್ಕೆ ಸಭೆಯನ್ನು ಕರೆಯಲಾಗಿದೆ. ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡಲು ವಾಲ್ಮೀಕಿ ಸಮುದಾಯದ ಹಿರಿಯರು, ಮಾರ್ಗದರ್ಶಕರು, ಉತ್ಸಾಹಿ ಯುವಕರು ಹಾಗೂ ಎಲ್ಲಾ ತಾಲೂಕುಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡಬೇಕೆಂದು ಅಧ್ಯಕ್ಷರಾದ ಶ್ರೀ ರವಿಕುಮಾರ ಎಂ. ಬನ್ನಿಕೊಪ್ಪ ಅವರು ತಿಳಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















