
ಬಳ್ಳಾರಿ / ಕಂಪ್ಲಿ : ಈದ್ ಮಿಲಾದ್ ಜೂಲುಸ್ ಸ್ಪರ್ಧೆಯಲ್ಲಿ ಯಾಸಿನ್ ಮಸೀದಿಯ
ತಂಡಕ್ಕೆ ಪ್ರಥಮ ಬಹುಮಾನಗಳಿಸಿದೆ. ಶಿಸ್ತು ಮತ್ತು ಕಲೆಗೆ ಸಂದ ಜಯವಾಗಿದೆ.
ಪಟ್ಟಣದಲ್ಲಿ ಬುದುವಾರ ಅತ್ಯಂತ ವೈಭವ ಹಾಗೂ ಸೌಹಾರ್ದತೆಯಿಂದ ಜರುಗಿದ ಈದ್ ಮಿಲಾದ್ (ಮಿಲಾದ್-ಉನ್-ನಬಿ) ಹಬ್ಬದ ಬೃಹತ್ ಜೂಲುಸ್ ಮೆರವಣಿಗೆ ಸ್ಪರ್ಧೆಯಲ್ಲಿ ಮೆಕ್ಕಾದಲ್ಲಿ ಮದೀನಾ ಸ್ಥಬ್ದ ಚಿತ್ರವನ್ನು ಪ್ರಥಮ, ಫ್ಯಾಕ್ಟರಿಯ ಮಸೀದಿಯ ದ್ವಿತೀಯ ಬಹುಮಾನವನ್ನು ಮುಡಿಗೇರಿಸಿಕೊಂಡಿದೆ. ಆಕರ್ಷಕ ಕಲಾಕೃತಿ, ಸೌಹಾರ್ದತೆಯ ಮೆರವಣಿಗೆಯಲ್ಲಿ ತಂಡವು ಪ್ರದರ್ಶಿಸಿದ ಪವಿತ್ರ ಮದೀನಾ ಮಸೀದಿ ಹಾಗೂ ಕಾಬಾ ಮಂದಿರದ ಅತ್ಯಂತ ಸುಂದರ ಹಾಗೂ ಆಕರ್ಷಕ ಪ್ರತಿಕೃತಿಗಳು ಸಾರ್ವಜನಿಕರ ಹರಸಿಕೆಗೆ ಪಾತ್ರವಾದವು. ಇದರೊಂದಿಗೆ ಪ್ರವಾದಿ ಮಹಮ್ಮದರ ಶಾಂತಿ, ಕರುಣೆ ಮತ್ತು ಸೌಹಾರ್ದತೆಯ ಬೋಧನೆಗಳನ್ನು ಸಾರುವ ಬ್ಯಾನರ್ಗಳು ಹಾಗೂ ಫಲಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿದವು.
ಸುಮಧುರವಾದ ಪ್ರವಾದಿ ಗೀತೆಗಳು (ನಅತ್ ಶರೀಫ್) ಮತ್ತು ಕಣ್ಮನ ಸೆಳೆಯುವ ಸ್ಥಬ್ದ ಚಿತ್ರಗಳು ಜೂಲುಸ್ಗೆ ವಿಶೇಷ ಮೆರುಗು ನೀಡಿತು.
ವೇದಿಕೆಯ ಮೇಲೆ ಪ್ರಥಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಶಿಖಾನೆ ಗೌಸುಲ್ವರಾ ಕಮಿಟಿ ಯಾಸಿನ್ ಮಸೀದಿ ಪ್ರಮುಖರು, “ಈ ಮಹತ್ತರ ಯಶಸ್ಸು ನಮ್ಮ ಇಡೀ ತಂಡದ ಸದಸ್ಯರ ಕಠಿಣ ಪರಿಶ್ರಮ, ಒಗ್ಗಟ್ಟು ಮತ್ತು ಶಿಸ್ತಿಗೆ ಸಂದ ಗೌರವವಾಗಿದೆ. ನಮಗೆ ಪ್ರಥಮ ಬಹುಮಾನ ನೀಡಿ ಪ್ರೋತ್ಸಾಹಿಸಿದ ಗೌರವಾನ್ವಿತ ತೀರ್ಪುಗಾರರಿಗೆ ಹಾಗೂ ಸಂಘಟಕರಿಗೆ ನಮ್ಮ ಸಮಿತಿ ಪರವಾಗಿ ಹೃದಯಪೂರ್ವಕ ಧನ್ಯವಾದಗಳು” ಎಂದು ತಿಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















