ಬ್ಯಾಂಕ್ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಇಳಕಲ್ : ನಗರದ ಎಪಿಎಂಸಿ ಆವರಣದಲ್ಲಿರುವ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ರವಿವಾರ ರಂದು ಬ್ಯಾಂಕಿನ ಆವರಣದಲ್ಲಿ ನಡೆಯಿತು.
ಸರ್ವ ಸಾಧಾರಣ ಸಭೆಯನ್ನು ಸಸಿಗೆ ನೀರು ಹಾಕುವ ಮೂಲಕ ಹಾಗೂ ಮಹಾಯೋಗಿ ವೇಮನ, ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅಧ್ಯಕ್ಷರು ಸರ್ವ ನಿರ್ದೇಶಕರು ಉದ್ಘಾಟಿಸಿದರು.
ಈ ಸರ್ವ ಸಾಧಾರಣ ಸಭೆಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಸಂಘವನ್ನು ಸ್ಥಾಪಿಸಿದ ಸಂಸ್ಥಾಪಕರಿಗೆ ಸತ್ಕರಿಸಿದರು, ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸತ್ಕರಿಸಿದರು.
ಈ ಬ್ಯಾಂಕ್ ನ ಸಂಸ್ಥಾಪಕ ಅಧ್ಯಕ್ಷರಾದ ವಿರುಪಾಕ್ಷಪ್ಪ ಮುರಾಳ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಸಂಘವನ್ನು ಇಳಕಲ್ ನಗರದಲ್ಲಿ ಸ್ಥಾಪನೆ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ ಎಲ್ಲರ ಸಹಕಾರದಿಂದ ಸ್ನೇಹಿತರೆಲ್ಲರ ಬಳಗದೊಂದಿಗೆ ಸ್ಥಾಪಿತವಾದ ಬ್ಯಾಂಕು, ಅಲ್ಪಾವಧಿಯಲ್ಲಿಯೇ ಜಿಲ್ಲೆಯಲ್ಲಿ ಉತ್ತಮ ಬ್ಯಾಂಕುಗಳಲ್ಲಿ ಹೇಮರೆಡ್ಡಿ ಸೌಹಾರ್ದ ಪತ್ತಿನ ಸಹಕಾರಿ ಸಂಘವು ಕೂಡ ಒಂದಾಗಿದೆ ಎಂದರೆ, ಈ ಬ್ಯಾಂಕ್ ಅನ್ನು ಸ್ಥಾಪನೆ ಮಾಡಿದ ಎಲ್ಲಾ ಹಳೆಯ ನಿರ್ದೇಶಕರುಗಳು ಈಗಿನ ನಿರ್ದೇಶಕರುಗಳು ಸಂಸ್ಥೆಯ ಹಿತೈಷಿಗಳು ಎಲ್ಲಾ ಷೇರುದಾರರು ಅಧಿಕಾರಿಗಳು ಎಲ್ಲರೂ ಕಾರಣೀಕರ್ತರಾಗಿದ್ದಾರೆ ಎಂದರು.
ಪ್ರಾಮಾಣಿಕವಾಗಿ ಸೇವೆ ಮಾಡಿದಾಗ ಫಲ ಖಂಡಿತವಾಗಿ ಸಿಗುತ್ತದೆ ಎಂಬುದಕ್ಕೆ ಈ ಬ್ಯಾಂಕ್ ಉದಾಹರಣೆ ಎಂದು ಮಾತನಾಡಿದರು.
ಪ್ರಸ್ತುತ ಬ್ಯಾಂಕಿನ ಅಧ್ಯಕ್ಷರಾದ ಶಶಿಕುಮಾರ ಎಂ. ಗೂಗಿಹಾಳ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮ ಸೌಹಾರ್ದ ಪತ್ತಿನ ಸಹಕಾರಿ ಸಂಘವು ಗುರು ಹಿರಿಯರ ಯುವ ಮಿತ್ರರ ಷೇರುದಾರರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಲಾಭಾಂಶವನ್ನು ಪಡೆಯುತ್ತಾ ಬರುತ್ತಿದೆ, 2025 26ನೇ ಸಾಲಿನಲ್ಲಿ 98, 68 ,168,00 ರಷ್ಟು ಲಾಭಾಂಶವನ್ನು ಪಡೆದಿದೆ ಎಂದರು.
ಈ ಸರ್ವಸಾಧಾರಣ ಸಭೆಯಲ್ಲಿ ಉಪಾಧ್ಯಕ್ಷರಾದ ದೇವರಡ್ಡೆಪ್ಪ ನಾಗರಾಳ, ನಿರ್ದೇಶಕರುಗಳಾದ ಬಸವರಾಜ ನಾಡಗೌಡರ, ಎಂ ಆರ್ ಪಾಟೀಲ್, ಅರವಿಂದ ಗೌಡರ, ವಸಂತ ಗುಡೂರು, ಸುಮಾ ಮಕಾಪುರ, ಕಾವೇರಿ ಕವಡಿಮಟ್ಟಿ, ಅಶೋಕ ಕಂದಕೂರ, ಮಲ್ಲನಗೌಡ ಗೌಡರ, ಹೇಮಣ್ಣ ಚಲವಾದಿ, ಬಸವರಾಜ ಪಾಟೀಲ್, ರಮೇಶ ತಳವಾರ, ಸಂತೋಷ ಬಂಡರಗಲ್ಲ, ನಿಂಗನಗೌಡ ಪಾಟೀಲ್, ಪೂರ್ಣಿಮಾ ಚಳಗೇರಿ, ಕಂಠೆಪ್ಪ ಲಕ್ಕುಂಡಿ,ಪ್ರಧಾನ ವ್ಯವಸ್ಥಾಪಕರಾದ ಮಹಾಂತೇಶ್ ಎಚ್ ಮಾಕಾಪುರ, ಸಿಬ್ಬಂದಿ ವರ್ಗದವರು ,ಶೇರುದಾರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬ್ಯಾಂಕ್ ನ ಅಧ್ಯಕ್ಷರು ನಿರ್ದೇಶಕರು, ಎಲ್ಲಾ ಶೇರುದಾರರು ಹಾಗೂ ಬ್ಯಾಂಕ್ ನ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















