ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಗೆ ನಗು ಫೌಂಡೇಶನ್ ಕಡೆಯಿಂದ 12 ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಶುದ್ಧೀಕರಣ ಯಂತ್ರವನ್ನು ನೀಡಲಾಯಿತು (ವಾಟರ್ ಫಿಲ್ಟರ್ ). ಮಕ್ಕಳ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿ ಸಕಲ ಸೌಲಭ್ಯವನ್ನು ಒದಗಿಸಿಕೊಟ್ಟ ನಗು ಫೌಂಡೇಶನ್ ಮತ್ತು ದೀಪ್ತಿ ಮೇಡಂರವರಿಗೆ ಶಾಲೆಯ ಶಿಕ್ಷಕರಾದ ಸಿ ಆರ್ ಸುರೇಶ್ ರವರು ಧನ್ಯವಾದಗಳನ್ನು ತಿಳಿಸಿದರು.
ಈಗಾಗಲೇ ನಮ್ಮ ಶಾಲೆಗೆ ನಗು ಫೌಂಡೇಶನ್ ಕಡೆಯಿಂದ ಲಕ್ಷಕ್ಕೂ ಹೆಚ್ಚಿನ ಬೆಲೆ ಬಾಳುವ ಹಲವಾರು ವಸ್ತುಗಳನ್ನು ಕೊಡಿಸಿರುವುದು ಶ್ಲಾಘನೀಯ ಕಾರ್ಯ ಎಂದು ಶಾಲೆಯ ಮುಖ್ಯಗುರುಗಳಾದ ಮಮತರವರು ಹೇಳಿದರು. ಇವರ ಕಾರ್ಯವನ್ನು ಎಸ್ ಡಿ ಎಂ ಸಿಯವರು, ಹಳೆ ವಿದ್ಯಾರ್ಥಿಗಳು ಹಾಗೂ ಸುಂಕದಗದ್ದೆ ಗ್ರಾಮಸ್ಥರು ಅಭಿನಂದಿಸಿದರು.
- ಕರುನಾಡ ಕಂದ ಸುದ್ದಿ




















