ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಾಲ ಬಸವ..

ಮಧುವರಸರು ದಿನನಿತ್ಯದಂತೆ ದೇವರ ಪೂಜೆಯಲ್ಲಿ ನಿರತರಾಗಿದ್ದಾರೆ.
ತುಂಬ ತುಂಟ ಸ್ವಭಾವದ ಬಾಲ ಬಸವ ಅಪ್ಪಾಜಿಯವರ ತೊಡೆಯ ಮೇಲೆ ಕುಳಿತಿದ್ದಾನೆ ಅವರನ್ನು ವಿವಿಧ ಪ್ರಶ್ನೆಗಳು ಕೇಳುತ್ತಾ.. ಅಪ್ಪಾಜಿ ಉಪನಿಷತ್ತು ಹೇಳುತ್ತದೆ. ” ದೇವರು ಒಬ್ಬನೇ ಇದ್ದಾನೆ” ಎಂದು ಇಷ್ಟೊಂದು ದೇವರುಗಳಿಗೆ ಏಕೆ ಪೂಜೆ ಮಾಡುತ್ತಿರುವಿರಿ ಎನ್ನುವನು.
ಬಸವ ನನಗೆ ಗೊತ್ತು ಉಪನಿಷತ್ತು, ವೇದ ಭಗವದ್ಗೀತೆ ನೀನು ನನ್ನ ಪೂಜೆಗೆ ವಿಘ್ನ ಮಾಡಬೇಡ ಹೊರ ನಡಿ ಎಂದು ಅಮ್ಮನ ಹತ್ತಿರ ಕಳಿಸುವರು.
ಮನೆಯಂಗಳಕ್ಕೆ ಬಂದ ಮಧುವರಸರು ಸೂರ್ಯ ದೇವನನ್ನು ಪೂಜಿಸುತ್ತಲಿದ್ದಾರೆ… ” ನಮೋ ಸೂರ್ಯಾಯಚ, ನಮೋ ಚಂದ್ರಾಯಚ,
ನಮೋ ಇಂದ್ರಾಯಚ…, “

ಬಾಲಕ ಬಸವ ಅಡುಗೆ ಮನೆಗೆ ಓಡುತ್ತಾ ಹೋಗಿ ಅಮ್ಮ ಅಮ್ಮ ನನಗೆ ನೀರಡಿಕೆಯಾಗಿವೆ ನೀರು ಕೊಡು ಎನ್ನುವನು.
ಮಾದಲಾಂಬಿಕೆ… ಸ್ವಲ್ಪ ತಾಳಿಕೋ ಮಗು ಅಪ್ಪಾಜಿಯವರ ದೇವರ ಪೂಜೆ ಮುಗಿಯುವವರೆಗೂ ಯಾರು ನೀರು ಕುಡಿಯಬಾರದು ಎಂದಳು.
ಆಯ್ತಮ್ಮಾ ಎಂದು ಹೊರನಡದ ಬಾಲಕ ಬಸವರಸ ಅಂಗಳದಲ್ಲಿ ಸಣ್ಣ ಸಣ್ಣನೆಯ ತಗ್ಗುಗಳನ್ನು ಕೆದರುತ್ತಲಿದ್ದಾನೆ.
ಬಸವನಿಗೆ ಹುಡುಕಲು ಹೊರಬಂದ ದಂಪತಿಗಳು….
ಬಸವ ಬಸವ ಎಂದು ಕೂಗುವರು…
ಅರೆ ಇಲ್ಲೇನು ಮಾಡುತ್ತಿರುವೆ ಕಂದ…
ಅರೆ ಇಷ್ಟೊಂದು ತಗ್ಗು ಗುಂಡಿ ತೆಗೆದವರು ಯಾರು ಎನ್ನುವರು?!…
ಬಸವ…. ನಾನೇ ಅಪ್ಪಾಜಿ ಎನ್ನುವನು..
ಇಷ್ಟೊಂದು ತಗ್ಗುಗಳನ್ನು ತೆಗೆದಿರುವೆ ಏಕೆ ?
ನನಗೆ ನೀರಡಿಕೆ ಆಗಿತ್ತು… ನೀರು ಕುಡಿಯಲು ಬಾವಿ ತೋಡುತ್ತಿದ್ದೇನೆ.
ಇಷ್ಟೊಂದು ಬಾವಿಗಳು ತೆಗೆಯುವ ಬದಲು ಒಂದೇ ಕಡೆ ಬಾವಿ ತೆಗೆದಿದ್ದರೆ ನೀರು ಸಿಗುತ್ತಿತ್ತು ಬಸವ ಎಂದರು .
ಹೌದು ಸರಿಯಾಗಿ ಎದೆ ಅಪ್ಪಾಜಿ ನೀವು ಹೇಳುತ್ತಿರುವುದು ಸರಿಯಾಗಿಯೇ ಒಬ್ಬನೇ ದೇವರಿಗೆ ಪೂಜಿಸುವ ಬದಲಿಗೆ ಹಲವು ದೇವರಿಗೆ ಪೂಜಿಸಿದರೆ ಆ ಪೂಜೆಯು ಯಾವ ದೇವರಿಗೆ ಸೇರಿತು ಹೇಳಿ ಎಂದನು.
ಭಲೇ ತಲೆ ಹರಟೆ ತಲೆ ಹರಟೆ…
ಪ್ರತಿಯೊಂದಕ್ಕೂ ಪ್ರಶ್ನೆ, ತರ್ಕ ಮಾಡುತ್ತಾನೆ.
ನಮ್ಮೆಲ್ಲಾ ಪೂರ್ವಜರ ಕಾಲದಿಂದ ಬಂದ ಪದ್ಧತಿಯಂತೆ ನಾವು ಪೂಜೆ ಯಜ್ಞ ಯಾಗ ಮಾಡುವುದು ಅದೆಲ್ಲವ ಬಿಟ್ಟು ನಿನ್ನಂತೆ ಪ್ರಶ್ನೆ ಮಾಡುತ್ತ ಕುಳಿತರೆ ಮುಗಿಯಿತು ಮನೆ ಒಳಗಡೆ ನಡಿ ಬಸವ… ಎಂದರು ಮದುವರಸರು

ಬರಕಬಸವ ಮನೆಯವರೆಲ್ಲರಿಗೂ ಅಚ್ಚು ಮೆಚ್ಚು ಹುಣ್ಣಿಮೆಯ ಚಂದಿರನಂತೆ ಬೆಳೆಯುತ್ತಾ ತನ್ನ ಬಾಲ ಲೀಲೆಗಳಿಂದ ಮನೆಯ ಯವರೆಲ್ಲರ ಮನ ಗೆದ್ದಿದ್ದ
ಹೀಗೆ ದಿನದಿಂದ ದಿನಕ್ಕೆ ದೊಡ್ಡವನಾಗುತ್ತಿದ್ದ ಬಸವ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ…..
ಮುಂದೊಂದು ದಿನ ತಾನೊಬ್ಬ ಕ್ರಾಂತಿ ಪುರುಷ, ಸಾಮಾಜಿಕ ಚಿಂತಕನಾಗಿ ಬೆಳೆಯುವುದಾಗಿ ತೋರಿಸಿಕೊಟ್ಟನು.
ಒಂದು ದಿನ ಅವರ ಮನೆಯ ಆಚಾರದಂತೆ ಮಡಿ ತೊಟ್ಟು ಗುಡಿಗೆ ಬಸವ ಹೊರಟಿದ್ದಾಗ…
ದಾರಿಯಲ್ಲಿ ಬ್ರಾಹ್ಮಣ ಶಾಸ್ತ್ರಿಗಳು ಒಬ್ಬರು ದಲಿತ ಹುಡುಗನ ಹುಡುಗನಿಗೆ ಕೋಲಿನಿಂದ ದನಕ್ಕೆ ಬಡಿದಂತೆ ಹೊಡೆಯುತ್ತಿದ್ದರು.
ಅದನ್ನು ಕಂಡ ಬಸವ ಹೊಡೆಯಬೇಡಿ ಶಾಸ್ತ್ರಿಗಳೇ.. ಇಷ್ಟೊಂದು ದಪ್ಪ ಕೋಲಿನಿಂದ ಹೊಡೆದರೆ ಅವನಿಗೆ ಪೆಟ್ಟಾಗುವುದಿಲ್ಲವೇ ನೋವಾಗುವುದಿಲ್ಲವೇ ಅವನು ಮನುಷ್ಯನೇ ಅಲ್ಲವೇ ಎನ್ನುತ್ತಾ ತಡೆಯುವನು…
ಶಾಸ್ತ್ರಿ… ಮಡಿ ಹುಟ್ಟು ದೇವರ ಹುಡುಗಿ ಹೊರಟಿದ್ದೀಯ ಬಸವ… ನಿನ್ನ ಮಡಿ ಹಾಳಾಗುತ್ತದೆ ಬಸವರಾಜ ಇವನಿಗೆ ಮುಟ್ಟಬೇಡ ಕೀಳು ಜಾತಿಯ ಮಾದಿಗ ಇವನು ಎಂದನು.
ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳದ ಬಸವ ಪೆಟ್ಟು ತಿಂದು ಕೆಳಗೆ ಬಿದ್ದಿದ್ದ ಬಾಲಕನಿಗೆ ಸಮಾಧಾನ ಮಾಡುತ್ತಾ ಮೇಲೆ ಏಳಲು ಎಬ್ಬಿಸಲು ಹೋದನು.
ಅಯ್ಯಯ್ಯೋ ಧರ್ಮ ಹಾಳಾಗಿ ಹೋಯಿತು.
ನಮ್ಮ ಉತ್ತಮ ಧರ್ಮದವರ ಮಾನ ಮರ್ಯಾದೆ ಗೌರವ ಎಲ್ಲವೂ ಉನ್ನತ ಕುಲದ ಬಸವ ಅರಸನಿಂದಲೇ ಹಾಳಾಗುತ್ತಿದೆ. ಇನ್ನು ಏನೇನು ಈ ಕಣ್ಣಿನಿಂದ ನಾನು ನೋಡಲಿ ಈ ಪಾಪ ಕಾರ್ಯ ನೋಡಿದ ನಾನು ಪರಿಹಾರಕ್ಕೆ ಹದಿ ನೀರಿನಲ್ಲಿ ಮುಳುಗಬೇಕು ಗೋಮೂತ್ರ ಸೇವಿಸಬೇಕು ಜಪ ತಪ್ಪು ಇವಾಗ ಹೋಮ ಹವನ ಮಾಡಬೇಕು ಎಂದು ಗುಣಗುತ್ತ ಬಸವನಿಂದಲೇ ಹಾಳಾದೆವು ನಾವೆಲ್ಲ ಬ್ರಾಹ್ಮಣರು ಎಂದು ಹೇಳುತ್ತಾ ಅಲ್ಲಿಂದ ಹೊರಟು ಹೋದನು.
ಬಿದ್ದವನಿಗೆ ಎಬ್ಬಿಸಿಕೊಂಡು ನಡೆಯಲು ಸಹಾಯ ಮಾಡಿ ಮರದ ಕೆಳಗೆ ಕೊಡಿಸಿದ ಬಸವ ಅರಸನು…
ಏನು ನಿನ್ನ ಹೆಸರು? ಏಕೆ ಹೊಡೆಯುತ್ತಿರು ಶಾಸ್ತ್ರಿಗಳು ನಿನ್ನನ್ನು ಎಂದು ಕೇಳಿದನು.
ನನ್ನ ಹೆಸರು ದ್ಯಾವಪ್ಪ ಅಂತ ಬುದ್ಧಿ… ನಮ್ಮ ಆಕಳ ಹಾಲು ಹಿಂಡಲೂ ಕರು ಬಿಟ್ಟುಕೊಳ್ಳುವಾಗ ಆಕಳ ಕರು ನಮ್ಮ ಹೊಲದೊಡ್ಡಿಯಿಂದ ನಿಮ್ಮ ಬ್ರಾಹ್ಮಣಕೇರಿಗೆ ಓಡುತ್ತಾ ಬಂದಿದೆ… ನಾನದರ ಹಿಂದೆ ಓಡುತ್ತಾ ಬಂದು ಶಾಸ್ತ್ರಗಳ ಮನೆಗೆ ಹೋಗಿದ್ದೆ ಅದಕ್ಕವರು ನನ್ನ ನೆರಳು ಅವರ ಮೇಲೆ ಬಿದ್ದಿದೆ ಎಂದು ಅವರು ಮೈಲಿಗೆಯಾದರೆಂದು ನನ್ನನ್ನು ಹೊಡೆಯುತ್ತಲಿದ್ದಾರೆ. ಎಲ್ಲಾ ನಮ್ಮ ಪೂರ್ವಜನ್ಮದ ಕರ್ಮ ಬಸವ ನನ್ನ ಪಾಡಿಗೆ ನನ್ನನ್ನು ಬಿಡು ನಾನು ಹೊರಡುತ್ತೇನೆ.
ಮತ್ತಾರಾದರೂ ನಮ್ಮನ್ನು ನೋಡಿದರೆ ನನ್ನನ್ನು ಜೀವ ಸಹಿತ ಬಿಡಲಾರರು ಒಂದೇ ಹಾಕುತ್ತಾರೆ ನಿಮ್ಮ ಜನ ನನಗೆ…
ಬಸವ… ಇವರೆಲ್ಲಾ ಈ ರೀತಿ ಕಷ್ಟಪಟ್ಟು ಹೇಗೆ ಉತ್ತಮರಾಗುತ್ತಾರೋ ನಾ ತಿಳಿಯೇನು.
ತಾನು ದೇವರಿಗೆ ತೆಗೆದುಕೊಂಡು ಹೋಗುತ್ತಲಿದ್ದ ಹಣ್ಣೋo ದನ್ನು ತೆಗೆದು…. ದ್ಯಾವಪ್ಪ.. ತೆಗೆದುಕೋ ತಿನ್ನು ಎಂದು ಕೈಚಾಚುವನು.
ಬೇಡ ಬಸವ ಬೇಡವೇ ಬೇಡ ಈಗಾಗಲೇ ಬಡಿಗೆಯಿಂದ ಹೊಡೆಸಿಕೊಂಡು ತಿಂದದ್ದು ಉಂಡದ್ದೇ ಸಾಕು ಮತ್ಯಾರಾದರೂ ನಿಮ್ಮವರು ಉತ್ತಮ ಕುಲದವರು ಇದನ್ನು ನೋಡಿದರೆ ನನ್ನ ಬಾಯಿಗೆ ಕಿವಿಗೆ ಕಾದ ಸೀಸವನ್ನು ಹಾಕಿ ಕೊಂದೇ ಬಿಡುತ್ತಾರೆ ನನ್ನನ್ನು ನೀನೇ ನೋಡಿಲ್ಲ ಏನು ಬಸವ ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡು ನನ್ನ ಗುಡಿಸಲಿಗೆ ಹೋಗುತ್ತೇನೆ.
ನಿನಗೆ ಯಾರು ಏನು ಮಾಡಲಾರರು ನಾನಿರುವ ತನಕ ಹೆದರಿದಿರು ದೇವಪ್ಪ….
ನೀನು ನಮ್ಮಂತೆ ಮನುಷ್ಯನಲ್ಲವೇ… ನಿನಗೂ ಎಲ್ಲರಂತೆ ಎರಡು ಕಣ್ಣು ಮೂಗು ಬಾಯಿ ಎಲ್ಲವೂ ಇದೆ ನೀನ್ ಹೇಗೆ ನಮ್ಮಿಂದ ಭಿನ್ನವಾಗಲು ಸಾಧ್ಯ.
ತೆಗೆದುಕೋ ಈ ಬಾಳೆಹಣ್ಣು ಇವತ್ತು ಇದನ್ನು ನೀನೆ ತಿನ್ನಬೇಕು.
ನಾನು ದಿನಾಲು ಶಿವಲಿಂಗಕ್ಕೆ ಏನಾದರೂ ನೈವೇದ್ಯ ಬಾಳೆಹಣ್ಣು ತೆಗೆದುಕೊಂಡು ಹೋಗಿ ತೋರಿಸುವುದು ಮತ್ತೆ ನಾವೇ ತಿನ್ನುವುದು. ಇದೇ ಆಗಿ ಹೋಯಿತು.
ಒಂದು ದಿನವೂ ಕೂಡ ದೇವರು ತಿನ್ನಲೇ ಇಲ್ಲ ತಿಳಿಯುತ್ತೆ ನಿನಗೆ ಹಾಗಾಗಿ ನೀನೇ ತಿನ್ನಬೇಕು ಎನ್ನುತ್ತ ಬಾಳೆಹಣ್ಣಿನ ಸಿಪ್ಪೆ ತೆಗೆದು ಅವನಿಗೆ ತಿನ್ನಿಸುವನು.
ಬಸವ… ನಿನಗೆ ವಿದ್ಯೆ ಕಲಿಯುವ ಆಸೆ ಇದೆ ಏನು ದ್ಯಾವಪ್ಪ..
ಆಶಯ ಇದೆ ಬುದ್ದಿ ನಮಗೆ ಯಾರು ಹೇಳಿ ಕೊಡುವರು ಇದ್ದೆ.. ಬುದ್ದಿ
ನಾವು ಮೊದಲೇ ಹೇಳು ಜಾತಿಯವರು, ನಮಗ್ಯಾರು ಮುಟ್ಟಿಸಿಕೊಳ್ಳಲ್ಲ, ನಮ್ಮ ನೆರಳು ತಾಗಿದರೆ ಮೈಲಿಗೆ ಆಗುತ್ತದೆ ಎನ್ನುತ್ತಾರೆ ಅಂತದರಲ್ಲಿ ನಮಗೆ ವಿದ್ಯೆ ಕಲಿಸುತ್ತಾರೆ ಬುದ್ದಿ…
ಇನ್ನು ನೀವೇ ಹೇಳಿ ಕೊಟ್ಟರೆ ಕಲಿಯಬಹುದು ನಾನು ನಮ್ಮ ಪಾಲಿನ ದೇವರು ನೀವು.
ನಮ್ಮಪ್ಪ ಹೇಳುತ್ತಿದ್ದ ಬುದ್ದಿ ನಾವು ಕಿಳು ಜಾತಿಯವರು ನಿಮ್ಮ ಕೇರಿಗೆ ಬರುವಾಗ ಕೊರಳಲ್ಲಿ ಕುಡಿಕೆ , ಬೆನ್ನ ಹಿಂದೆ ಜಾಡು ಕಟ್ಟಿಕೊಂಡು ಗೆಜ್ಜೆ ಕೋಲು ತೆಗೆದುಕೊಂಡು ಮಧ್ಯಾಹ್ನದ ಹೊತ್ತಿಗೆ ಬರಬೇಕಂತೆ?
ಅವರ ಮಾತು ಕೇಳದೆ ಕರುವಿನ ಹಿಂದೆ ಬಂದು ನಾನು ಇವತ್ತು ಕೆಟ್ಟನು.

ಬಸವ….ಅರೆ ಏಕೆಂತೇ ಹಾಗೇಕಂತೆ … ಜಾಡು… ಓಣಿಯ ಕಸ ಗುಡಿಸಲಿಕ್ಕೇನು? ಮತ್ತೆ ಕುಡಿಕೆ ನೀವು ನಿರುಕುಡಿಯಲೇನು?
ಹಾಗಲ್ಲ ಬಸವರಸರೆ… ನಮ್ಮ ಹೆಜ್ಜೆ ಗುರುತು ನಿಮ್ಮ ಓಣೆಯಲ್ಲಿ ಬಿದ್ದು ನಿಮ್ಮ ಓಣಿ ಮೈಲಿಗೆ ಆಗಬಾರದು ನಮ್ಮ ಹೆಜ್ಜೆ ಗುರುತುಗಳು ನಾವೇ ಅಳಿಸಬೇಕು ಅದಕ್ಕಾಗಿ ಜಾಡು ಹಿಂದೆ ಕಟ್ಟಿಕೊಂಡು ಬರಬೇಕು.
ನಿಮ್ಮ ಓಣಿಯಲ್ಲಿ ನಾವುಗಳು ಬಂದಾಗ ಉಗುಳಬಾರದು ಹಾಗೆ ಏನಾದರೂ ಮಾಡಿದರೆ ನಿಮ್ಮ ಓಣಿ ಮೈಲಿಗೆ ಯಾಗಿ ಹೋಗುತ್ತದೆ ಹಾಗಾಗಿ ಕೊರಳಲ್ಲಿ ಕ ಕಟ್ಟಿಕೊಂಡ ಕುಡಿಕೆಯಲ್ಲಿ ನಾವು ಉಗುಳಬೇಕು.
ಅರೆ ಮತ್ತೆ ಮಧ್ಯಾನವೆ ಏಕೆ ಬರಬೇಕು?! ಮುಂಜಾನೆ ಮತ್ತು ಸಂಜೆ ಕೂಡ ಬರಬಹುದಲ್ಲ…
ನೀವು..
ಮುಂಜಾನೆ ಮತ್ತು ಸಂಜೆ ಮನುಷ್ಯರ ನೆರಳು ದೊಡ್ಡದಾಗಿರುತ್ತದೆ ಈ ಹೊತ್ತಿನಲ್ಲಿ ಬಂದರೆ ನಿಮ್ಮ ಮನೆಯ ಮೇಲೆ ನಿಮ್ಮ ಮೇಲೆ ನಮ್ಮ ನೆರಳು ಬಿದ್ದು ನೀವು ಮೈಲಿಗೆ ಆಗುತ್ತೀರಿ
ಮಧ್ಯಾಹ್ನದಲ್ಲಿ ನಮ್ಮ ಕಾಲ ಬಳಿಯೇ ನಮ್ಮ ನೆರಳು ಇರುತ್ತದೆ.
ಹಾಗಾಗಿ ನೆರಳು ಯಾರ ಮೇಲೆಯೂ ತಾಕದು ನೀವ್ಯಾರು ಮೈಲಿಗೆ ಆಗಲಾರಿರಿ ಎಂದು ನಮ್ಮಪ್ಪ ಹೇಳಿದನು.
ಮತ್ತೆ ಗೆಜ್ಜೆ ಗೆಜ್ಜೆಕೊಲು ಎತ್ತಕ್ಕೆ ತರಬೇಕು ನೀವು ನಮ್ಮ ಓಣಿಗೆ ಬರುವಾಗ??
ಗೆಜ್ಜೆ ಶಬ್ದ ಮಾಡುವದರಿಂದ ನೀವೆಲ್ಲ ಜಾಗೃತರಾಗಿ ನಿಮ್ಮ ನಿಮ್ಮ ಮನೆಗೆ ನೀವು ಹೋಗಬೇಕು ನೀವು ಮೈಲಿಗೆ ಅಗಲಯಿರಿ ಮಡಿಯಾಗೆ ಇರುವಿರಿ ಎನ್ನುವ ದೃಷ್ಟಿಯಿಂದ ನಾವು ಗೆಜ್ಜೆ ಕೋಲನ್ನು ತೆಗೆದುಕೊಂಡು ಬರಬೇಕು.

  • ವೀರಶೆಟ್ಟಿ ಐನಾಪುರ, ಚಿಟಗುಪ್ಪ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!