ಡ್ರ್ಯಾಗನ್ ಹಣ್ಣಿನ ತೊಗಟೆಯಲಿನ ಪುಷ್ಪ ನಡುವಲಿ
ಬಾಳೆ ಎಲೆಯ ತುಣುಕುಗಳು ಸೇರಿವೆ ಜೊತೆಯಲಿ
ದಾಳಿಂಬೆ ಸಿಪ್ಪೆಯ ಗರಿಗಳು ನಲಿದಿವೆ ಸಿಂಗಾರದಲಿ
ಅರಳಿ ನಿಂದಿದೆ ಚಿತ್ತಾರವಾಗಿ ಲಿಲ್ಲಿ ಹೂವಿನ ದಿಂಡಿನಲಿ
ಕವಿ ಭಾವದಿ ಪದಗಳ ಜೋಡಿಸಲು ಸಾಲಾಗಿ
ಮೂಡಿರುವುದು ಸುಲಲಿತೆಯ ಲಘು ಕಾವ್ಯವಾಗಿ
ಓದುಗ ಸುಮನಗಳಲಿ ಹಂಚಿಕೊಳಲು ಮನಸಾಗಿ
ಸುಪ್ರಭಾತದಿ ಕಲಾರಾಧಕರಲ್ಲಿಗೆ ಬರುತಿದೆ ಹಾಯಾಗಿ
- ಲಲಿತಾ ಕೆ ಆಚಾರ್, ಬೆಂಗಳೂರು




















