ಕರ್ನಾಟಕದ ಕಾಶ್ಮೀರ ಕಾಫಿ ನಾಡು ಕೊಡಗು
ಬಣ್ಣಿಸಲಸದಳ ನಿಸರ್ಗ ವಿಸ್ಮಯದ ಸೊಬಗು
ಅದೊ ನೋಡಿ ಕಡು ಕೆಂಪಿನೆಲೆಗಳ ಬೆಡಗು
ಜೊತೆಗಿದೆ ಹೊಂಬಣ್ಣದ ಗರಿ ಗರಿ ಎಲೆಗಳ ಬೆರಗು
ಸುತ್ತ ಹರಡಿರಲು ಕನಕಾಂಬರ ಹಸಿರ ತೆನೆಗಳು
ಹೊಮ್ಮಿರುವ ಸುಲಲಿತ ಕಾವ್ಯ ಚಿತ್ತಾರದ ಕಿರಣಗಳು
ಅರಳಿಸಿವೆ ಶುಭೋದಯದಿ ಎಲ್ಲರ ನಯನಗಳು
ಆಸ್ವಾದಿಸುತ ಅಕ್ಷಿಪಠಗಳಲಿ ತುಂಬಿಕೊಳುವ ಈ ಕ್ಷಣಗಳು
- ಲಲಿತಾ ಕೆ ಆಚಾರ್, ಬೆಂಗಳೂರು




















