ಬಳ್ಳಾರಿ / ಕಂಪ್ಲಿ : ಮಹಿಳಾ ಸಬಲೀಕರಣ ಹಾಗೂ ಶೋಷಿತರ ಧ್ವನಿಯಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿರುವ ಪ್ರಮುಖ ಸಂಘಟನೆಯಾದ ‘ಅಕ್ಕ ಮಹಿಳಾ ಕಾನೂನು ಮತ್ತು ರಕ್ಷಣಾ ಪಡೆ (ನೊಂ.)’ ಇದರ ಯುವ ಘಟಕದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಯುತ ರಾಜಾಭಕ್ಷಿ ಅಬ್ದುಲ್ ರಝಾಖ್ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ. ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಜನ್ಮಭೂಮಿ ಫೈರೋಝ್ ಖಾನ್ ಅವರು ರಾಜಾಭಕ್ಷಿ ಅವರ ಸಮಾಜಮುಖಿ ಕಾರ್ಯಗಳು ಮತ್ತು ಸಂಘಟನಾ ಚಾತುರ್ಯವನ್ನು ಗುರುತಿಸಿ ಈ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದು, ಈ ನೇಮಕಾತಿ ಆದೇಶವು ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.
ಸಂಘಟನೆಯ ನೇಮಕಾತಿ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸ್ಥಾಪಕ ರಾಜ್ಯಾಧ್ಯಕ್ಷ ಜನ್ಮಭೂಮಿ ಫೈರೋಝ್ ಖಾನ್ ಅವರು, “ನೂತನ ಪದಾಧಿಕಾರಿಗಳು ಕೂಡಲೇ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಮೂಲಕ ಸಂಘಟನೆಯನ್ನು ತಳಮಟ್ಟದಿಂದ ಬಲವರ್ಧನೆಗೊಳಿಸಬೇಕಿದೆ. ಹೆಣ್ಣಿನ ಮಾನ, ಪ್ರಾಣ ಹಾಗೂ ಅವರ ಹಕ್ಕುಗಳ ರಕ್ಷಣೆಯೇ ನಮ್ಮ ಸಂಘಟನೆಯ ಪರಮೋಚ್ಚ ಧ್ಯೇಯವಾಗಿದೆ. ಸಮಾಜದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಹೋರಾಡಲು ಮತ್ತು ಸಂಘಟನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ನೂತನ ಕಾರ್ಯದರ್ಶಿಗಳು ಹಗಲಿರುಳೆನ್ನದೆ ಶ್ರಮಿಸಬೇಕಿದೆ. ಅವರ ಕಾರ್ಯವೈಖರಿಯ ಮೇಲೆ ಸಂಘಟನೆಗೆ ಸಾಕಷ್ಟು ನಿರೀಕ್ಷೆಗಳಿವೆ,” ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ರಾಜಾಭಕ್ಷಿ ರವರು ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ರಾಜಬಕ್ಷಿ ಅವರಿಗೆ ಸಂಘಟನೆಯ ಪದಾಧಿಕಾರಿಗಳು, ಮುಖಂಡರು, ಹಿತೈಷಿಗಳು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು ಹರಿದು ಬರುತ್ತಿವೆ.
ವರದಿ : ಜಿಲಾನಸಾಬ್ ಬಡಿಗೇರ್




















