ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಮ್ಮ ಕರ್ನಾಟಕ

ನಾಡ ನೆಲದ ಮಣ್ಣಿನಲ್ಲಿ
ಅಮೃತದ ಚೇತನ ಕಣಕಣದಲ್ಲಿ
ಸೂರ್ಯ ಚಂದ್ರರು ನಾಡಿನಲ್ಲಿ
ತೈಲವಾಗಿರುವರು ಬೆಳಗಲಿಲ್ಲಿ

ಗಂಗೆ ತುಂಗೆ ಕಾವೇರಿಯರಿಲ್ಲಿ
ನೆಲೆನಿಂತು ಹಸಿರಿಸಿ ನೆಲವನ್ನಿಲ್ಲಿ
ಜೀವ ಸಂಕುಲಗಳ ಸಲುಹಿ ನಿಸ್ವಾರ್ಥದಲ್ಲಿ
ನಾಡ ಹಿರಿಮೆಗೆ ಹೆಸರಾದರಿಲ್ಲಿ

ಜೋಗ ಜಲಪಾತದ ಶರಗಿನಲ್ಲಿ
ಹೊಳೆಗಳು ಕರುಳಾಗಿ ಮಲೆನಾಡಿಗಿಲ್ಲಿ
ಶ್ರೀಗಂಧವ ಪಸರಿಸಿ ಗಾಳಿಯಲ್ಲಿ
ಗಂಧದ ಗೂಡನ್ನಾಗಿಸಿವೆ ನಾಡನ್ನಿಲ್ಲಿ

ಬಯಲು ಸೀಮೆಯ ನೆಲದಲ್ಲಿ
ಸಿರಿಧಾನ್ಯಗಳು ಐಸಿರಿಯಾಗಿ ಪೈರಿನಲ್ಲಿ
ಬೆಳಸಿ ಕಳಸವಾಗಿ ಅನ್ನಕ್ಕಿಲ್ಲಿ
ನಾಡಿಗೆ ಜೇನಾಗಿವೆ ಉಣಲಿಲ್ಲಿ

ನಾಡ ಮಾತೃವಿನ ಮಡಿಲಲ್ಲಿ
ಕನ್ನಡ ಗುಡಿಯಾಗಿ ಪೂಜೆಗಿಲ್ಲಿ
ಮಾತನಾಡುವ ಭಕ್ತರ ಹೃದಯದಲ್ಲಿ
ಹೂವಾಗಿ ಪರಿಮಳಿಸುತ್ತಿದೆ ನಿತ್ಯದಲ್ಲಿ

  • ಕಲ್ಲಪ್ಪ ಕವಳಕೇರಿ ಮಂಗಳೂರು✍️
    ( ಕೊಪ್ಪಳ ಜಿಲ್ಲೆ )
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!