ದೀಪಾವಳಿ ದೀಪಾವಳಿ
ಮನೆಯಂಗಳದಿ ಚೆಲುವುಳ್ಳ ಸಾಲು ಸಾಲು ಹಣತೆ ದೀಪಗಳ ಹಾವಳಿ
ಮನೆ ಮಹಲುಗಳ ಮೇಲೆ ಬಣ್ಣ ಬಣ್ಣದ ದೀಪಗಳ ಪ್ರಭಾವಳಿ. !!
ಎಲ್ಲರ ಮನೆ ಮನಗಳ ಜ್ಯೋತಿ
ಸಹೋದರಿಯರು ಎತ್ತುವರು ಆರತಿ
ಆ ಆರತಿಯಲ್ಲಿ ತುಂಬಿದೆ ಭ್ರಾತೃಪ್ರೇಮದ ಪ್ರೀತಿ
ಹೃದಯದಲಿ ಅಚ್ಚೊತ್ತುತ ಮೂರುತಿ !!
ಮನೆಯಂಗಳದಿ ಸಿಡಿಯುವ ನಾನಾ ರೀತಿಯ ಮದ್ದು
ಮದ್ದು ಮದ್ದುಗಳ ನಡುವೆ
ಬಿದ್ದಿದೆ ಸಿಡಿಯುವ ಜಿದ್ದು
ಕಿವಿಗಡಿಚಿಕ್ಕುವ ಸದ್ದು
ಪಟಾಕಿಗಳೆಂದರೆ ಮಕ್ಕಳಿಗೆಷ್ಟು ಮುದ್ದು ಅದನೋಡಿ ಹಿರಿಯರು ನಗುತಿಯರು ಬಿದ್ದು ಬಿದ್ದು
ಪುಟಾಣಿಗಳ ಕಣ್ಣುಗಳ ಬಗ್ಗೆ ಖಂಡಿತ ಇರಲಿ ಎಚ್ಚರ !!
ರಚನೆ :ನೀಲಕಂಠ ಮ.ಕಾಳಗಿ
ನಿವೃತ್ತ ಶಿಕ್ಷಕರು ಹಾಗೂ ಧರ್ಮದರ್ಶಿಗಳು ಶಾರದಾ ಮಂದಿರ ಇಲಕಲ್ಲ.



















