ಬಂಗ ಬರದಂತೆ ರಾಷ್ಟ್ರೀಯತೆಗೆ
ಒಂದಾಗಬೇಕು ದೇಶದ ಭದ್ರತೆಗೆ
ಹೊಂಚು ಹಾಕಿದರ ಅಸ್ಥಿರತೆಗೆ
ಉಳಿಯಲ್ಲ ಯಾರೂ ಸೆಳವಿಗೆ
ಕಲ್ಲಿಟ್ಟರ ಹುಚ್ಚರ ಕೈಯಿಗೆ
ಬೀಳುವುದು ಕೊಟ್ಟವರ ಹಣೆಗೆ
ಜಾಣ ನಡೆಯಿಂದ ಬದಲಾವಣೆಗೆ
ಶ್ರಮಿಸಿದರ ಫಲ ವರುಷದೊಳಗೆ
ಇಲ್ಲದ್ದು ಹೇಳಿ ಕಿವಿಯೊಳಗೆ
ಸುನಾಮಿ ಎಬ್ಬಿಸಿದರ ಸಮಾಜದೊಳಗೆ
ಬದುಕನ್ನೇ ಕಸಿವರು ಕ್ಷಣದೊಳಗೆ
ಸನ್ಮಾರ್ಗವೇ ಯೋಗ್ಯ ಉಳಿವಿಗೆ
ದುಡಿವ ಆಸೆಯ ಮನೆದೊಳಗೆ
ಕಲ್ಮಶ ತುಂಬದಂತಿರಬೇಕು ಏಳ್ಗೆಗೆ
ಕರೆಯದೆ ಕಸಿವ ಹಾದಿಗೆ
ಪ್ರೋತ್ಸಾಹಿಸಬೇಕು ದುಡಿವ ಕರಗಳಿಗೆ
ನಾಡು ನುಡಿ ದೇಶದೊಳಗೆ
ಒಗ್ಗಟ್ಟೇ ಶಕ್ತಿ ಅಭಿವೃದ್ಧಿಗೆ
ಒಗ್ಗಟ್ಟು ಒಡೆಯದೆ ಸ್ವಾರ್ಥ ಸಾಧನೆಗೆ
ಏಕತೆಯಿಂದಲೇ ಬಾಳಬೇಕು ಉಳಿವಿಗೆ
- ಕಲ್ಲಪ್ಪ ಕವಳಕೇರಿ ಮಂಗಳೂರು✍️
( ಕೊಪ್ಪಳ ಜಿಲ್ಲೆ)

















