ನಮ್ಮ ಭಾರತ ಜಗದೊಳಗೆ
ಹೆಸರಾಗಿದೆ ಬೆಳೆದು ಪ್ರಬುದ್ಧತೆಗೆ
ವಿಜ್ಞಾನ ತಾಂತ್ರಿಕ ಪ್ರಾವೀಣ್ಯತೆಗೆ
ಸಿಗುತ್ತಿದೆ ಆಹ್ವಾನ ಭಾರತೀಯರಿಗೆ
ಬರ ಬಂದರೂ ದೇಶದೊಳಗೆ
ಕೊರತೆಯಿಲ್ಲ ಉಣುವ ಕೈಗಳಿಗೆ
ಆಹಾರ ಔಷಧಿ ಉಗ್ರಾಣದೊಳಗೆ
ಸಂಗ್ರಹವಿದೆ ನಮ್ಮ ಜನತೆಗೆ
ಕುಗ್ಗದ ಪ್ರಜೆಗಳು ದೇಶದೊಳಗೆ
ದುಡಿವರು ಶ್ರಮಿಸಿ ಕಾಯಕದೊಳಗೆ
ಕೃಷಿ ಕೈಗಾರಿಕೆ ಕ್ಷೇತ್ರದೊಳಗೆ
ಸ್ವಾಭಿಮಾನದಿ ದುಡಿವರು ಉತ್ಪಾದನೆಗೆ
ಹಸಿದು ನರಳುವವರಿಲ್ಲ ಮನೆಯೊಳಗೆ
ಸರಕಾರಗಳ ನೆರವಿದೆ ಆಹಾರ ಭದ್ರತೆಗೆ
ಬೆಳೆವವರು ದುಡಿವವರು ದೇಶದೊಳಗೆ
ಹಗಲಿಳು ಸಿದ್ದರಿರುವರು ಉತ್ಪಾದನೆಗೆ
ಬಲಿಷ್ಠ ಸೈನ್ಯ ರಕ್ಷಣೆಗೆ
ವಿಶಾಲ ಮೈದಾನ ಅಭಿವೃದ್ಧಿಗೆ
ಕೆರೆಕಟ್ಟೆ ನದಿಗಳು ಕೃಷಿಗೆ
ನಮ್ಮ ಭಾರತ ನಮಗ ಹೆಮ್ಮೆ ಅಭಿವೃದ್ಧಿಗೆ
- ಕಲ್ಲಪ್ಪ ಕವಳಕೇರಿ ಮಂಗಳೂರು
(ಕೊಪ್ಪಳ ಜಿಲ್ಲೆ).




















