ಕರುನಾಡ ಹಬ್ಬವು ದಸರಾ
ಕಣ್ಣಿಗೆ ನೋಡಲು ಸುಂದರ
ಸುತ್ತೆಲ್ಲ ದೀಪಗಳ ಅಲಂಕಾರ
ಮೈಸೂರು ಇತಿಹಾಸ ಅಮರ.
ಸಾಂಸ್ಕೃತಿಕ ನಗರಿ ಮೈಸೂರು
ಗತವೈಭವ ಸಾರುವ ತವರೂರು
ಚಾಮುಂಡಿ ತಾಯಿ ನೆಲೆಸಿದೂರು
ಭಕ್ತರ ನಂಬಿಕೆಗೆ ಹೆಸರಾದ ಊರು.
ರಾಜ ಮಹಾರಾಜರ ನಾಡಿದು
ಚಿತ್ರಕಲೆಯ ಅರಮನೆ ಬೀಡಿದು
ಸೊಬಗಿನೈಸಿರಿ ತುಂಬಿದ ಗೂಡಿದು
ನೋಡಲೆರಡು ಕಣ್ಣುಗಳು ಸಾಲದು.
ಚಿನ್ನದ ಅಂದದ ಅಂಬಾರಿ
ಗಜ ಗಾಂಭೀರ್ಯ ಸವಾರಿ
ನಡೆದಿದೆ ತಿಂಗಳ ತಯಾರಿ
ಒಡೆಯರ ವಂಶವೇ ರೂವಾರಿ.
ನೋಡಲು ಸುಂದರ ದಸರಾ
ಬಾಂಧವ್ಯ ಹಂಚುತ ಪರಸ್ಪರ
ಆನಂದ ಪಡೆಯುತ ಮನಸಾರ
ಕಳೆಯೋಣ ಮನದೊಳ ಬೇಸರ.
-ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ:-9740199896.




















