ಕೊಪ್ಪಳ:ಮೊನ್ನೆ ಗಂಗಾವತಿ ತಾಲೂಕ ಮಟ್ಟದ ಪ್ರೌಢ ಶಾಲೆಯ ಕ್ರೀಡಾ ಕೂಟ ಆಯೋಜಿಸಿದ್ದು ಮೈದಾನ ಹದೆಗೆಟ್ಟಿದ್ದು ಹಾಗೂ ಹಿಂದಿನ ದಿನ ಮಳೆ ಬಂದರೂ ಕೂಡ ಮರು ದಿನವೇ ಕಾಟಾಚಾರಕ್ಕೆ ವೈಯಕ್ತಿಕ ಆಟೋಟಗಳನ್ನು ಆಯೋಜಿಸಿ ಮಕ್ಕಳಲ್ಲಿ ಕ್ರೀಡೆಯ ಬೆಳವಣಿಗೆ ಕುಂಠಿತವಾಗುವಂತೆ ವರ್ತಿಸಿದ್ದಾರೆ ಅನ್ನೋದನ್ನು ತೋರಿಸುತ್ತದೆ ಹಳ್ಳಿಯ ಪ್ರತಿಭೆಗಳು ತಾಲೂಕ ಮಟ್ಟಕ್ಕೆ ಬಂದು ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ ಆದರೆ ಇದು ಈ ವ್ಯವಸ್ಥೆಯಲ್ಲಿ ನಡೆದಿದ್ದು ಬಹಳ ನೋವನ್ನುಂಟು ಮಾಡುತ್ತದೆ. ಪ್ರಥಮ ,ದ್ವಿತೀಯ ಹಾಗೂ ವೀರಾಗ್ರಣಿ ಆಗಿದ್ದರೂ ಸ್ಪರ್ಧಾಳುಗಳಿಗೆ ಇಲಾಖೆಯು ಬರೀ ಪ್ರಶಸ್ತಿ ಪತ್ರ ನೀಡಿರುವುದು ಮಕ್ಕಳ ಅಸಮಾಧಾನಕ್ಕೆ ಕಾರಣವಾಗಿದೆ.




















