ಸಿರುಗುಪ್ಪ-ತಾಲೂಕು ಹಳೆಕೋಟೆ ಗ್ರಾಮದಲ್ಲಿ ಬಳಗಾನೂರು ಮರಿಸ್ವಾಮಿಗಳ ಮಠ ಮರಿ ಶಿವಯೋಗಿಗಳ 117ನೇ ಪುಣ್ಯರಾಧನೆ ಜೋಡಿ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಮರಿ ಶಿವಯೋಗಿಗಳ ಮಠದ ಪೀಠಾಧಿಪತಿ ಮ.ನಿ. ಪ್ರ. ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನಿಧ್ಯ ಮ.ನಿ. ಪ್ರ. ಸಿದ್ದ ಬಸವ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಜಾತ್ರಾ ಮಹೋತ್ಸವ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಭಕ್ತರು ಜೋಡಿ ರಥಗಳಿಗೆ ಹೂ ಹಣ್ಣು ಎಸೆದು ಶಿವಯೋಗಿಗಳಿಗೆ ಜಯವಾಗಲಿ ಎಂಬ ನುಡಿಮುತ್ತುಗಳ ಘೋಷಣೆ ಕೂಗಿ ಕೈ ಮುಗಿದು ಪ್ರಾರ್ಥಿಸಿದರು. ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















