ಸಿರುಗುಪ್ಪ- ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಜಾನುವಾರು ಪ್ರಾಣಿ ಪಕ್ಷಿ ಮುಖ್ಯವಾಗಿ ಸಾರ್ವಜನಿಕರಿಗೆ ಬಿಸಿಲಿನಿಂದ ತೀವ್ರ ಜಲ ದಾಹ ನೀಗಿಸಲು ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಅವರು ಹೇಳಿದರು ಈ ಬಗ್ಗೆ ಬಿಜೆಪಿಯಿಂದ ಈಗಾಗಲೇ ಮನವಿ ಮಾಡಿರುತ್ತೇವೆ ಆದರೆ ತುಂಗಭದ್ರಾ ಡ್ಯಾಮಿನ ಎಲ್ ಎಲ್ ಸಿ ಕಾಲುವೆಯಿಂದ ವೇದಾವತಿ ಹಗರಿ ನದಿಗೆ ನೀರು ಬಿಡುವಂತೆ ಬೇಸಿಗೆ ಕುಡಿಯುವ ನೀರಿನ ಕೆರೆಗಳು ಹಳ್ಳಗಳು ಬಾವಿಗಳು ಬೋರ್ವೆಲ್ ಗಳು ವೇದಾವತಿ ಹಗರಿ ನದಿಗೆ ನೀರಿಲ್ಲದೆ ಬತ್ತಿಹೋಗಿದೆ ಸಾರ್ವಜನಿಕರಿಗೂ ಜಾನುವಾರುಗಳಿಗೆ ಪ್ರಾಣಿ ಪಕ್ಷಿಗಳಿಗೂ ತುಂಬಾ ತೊಂದರೆ ಆಗಿರುತ್ತದೆ ತುಂಗಭದ್ರಾ ಜಲಾಶಯದ ಬಲದಂಡೆಯ ಕೆಳಮಟ್ಟದ ಕಾಲುವೆಗೆ ಕುಡಿಯುವ ನೀರು ಬಿಡಲಾಗಿದೆ ಈ ನೀರಿನಿಂದ ಕುಡಿಯುವ ನೀರಿನ ಕೆರೆಗಳಿಗೆ ಗ್ರಾಮ ಪಂಚಾಯಿತಿಗಳಿಗೆ ನೀರನ್ನು ತುಂಬಿಸುತ್ತಿದ್ದಾರೆ ಈ ನೀರು ಕೆಳಭಾಗದಲ್ಲಿರುವ ವೇದಾವತಿ ಹಗರಿ ನದಿಯ ಪಕ್ಕದ 50 ಹಳ್ಳಿಗಳಿಗೆ ನೀರು ತಲುಪದೇ ಜನರಿಗೂ ಮತ್ತು ಜಾನುವಾರು ಪ್ರಾಣಿ ಪಕ್ಷಿಗಳಿಗೂ ಅತ್ಯಂತ ಸಂಕಷ್ಟವಾಗಿರುತ್ತದೆ ತುಂಗಭದ್ರ ಡ್ಯಾಮ್ ಎಲ್ಎಲ್ಸಿ ಕಾಲುವೆ ಮೋಕ ಗ್ರಾಮದ ಹತ್ತಿರದಿಂದ ವೇದಾವತಿ ಹಗರಿ ನದಿಗೆ ನೀರು ಬಿಟ್ಟರೆ ತುಂಬಾ ಅನುಕೂಲವಾಗಲಿದೆ ಹೀಗಾಗಿ ನದಿಗೆ ನೀರು ಬಿಡುಗಡೆ ಮಾಡಬೇಕು ಬಳ್ಳಾರಿ ತಾಲೂಕಿನ ಮೋಕ ಎರ್ರಗುಡಿ ಬಸರಕೋಡು ಸಿರುಗುಪ್ಪ ತಾಲೂಕಿನ ತಾಳೂರು ಊಳೂರು ಉತ್ತನೂರು ಮಾಟಸುಗೂರು ಕುರಿಗನೂರು ಬೂದುಗುಪ್ಪ ಮುದೇನೂರು ಮೈಲಾಪುರು ಬಲಕುಂದಿ ಅರಳಿಗನೂರು ಚಾಣನೂರು ಬಗ್ಗೂರು ರಾರಾವಿ ಕರ್ಚಿಗನೂರು ತೊಂಡೆಹಾಳು ರಾಂಪುರು ಗಜಗಿನಾಳು ಕುರುವಳ್ಳಿ ರಾಂಪುರ್ ಬಾಗೇವಾಡಿ ಕುಡುದರ ಹಾಳು ಸೇರಿದಂತೆ ಸುಮಾರು 50 ಹಳ್ಳಿಗಳಿಗೆ ನೀರು ಬಿಡುಗಡೆ ಮಾಡಿದರೆ ತುಂಬಾ ಅನುಕೂಲ ಆಗುತ್ತದೆ ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದರು
ಸಿರುಗುಪ್ಪ ನಗರದ ಪ್ರವಾಸಿ ಮಂದಿರದಲ್ಲಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಅವರು ಪತ್ರಕರ್ತರೊಂದಿಗೆ ಈ ವಿಷಯವನ್ನು ತಿಳಿಸಿ ಸಿರುಗುಪ್ಪ ತಾಲೂಕಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಸರ್ಕಾರದ ಯೋಜನೆ ಮತ್ತು ಸಮಸ್ಯೆಗಳ ಕುಂದು ಕೊರತೆ ಬಗ್ಗೆ ಮನವಿ ಅರ್ಜಿಗಳನ್ನು ಸ್ವೀಕರಿಸಿದ ಅವುಗಳನ್ನು ಜನರಿಗೆ ಕೆಲಸ ಕಾರ್ಯ ಸರಿಯಾದ ರೀತಿಯಲ್ಲಿ ಮಾಡು ಕೊಡುತ್ತಿಲ್ಲ ಇದರಿಂದ ಜನರ ಸಮಸ್ಯೆಗಳನ್ನು ವಿಳಂಬದಿಂದ ತೊಂದರೆ ಆಗುತ್ತದೆ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುವುದಾಗಿ ಮತ್ತು ಭಾರತೀಯ ಜನತಾ ಪಕ್ಷದ ಪರವಾಗಿ ಸಾಂಕೇತಿಕವಾಗಿ ತಹಶೀಲ್ದಾರ್ ಕಚೇರಿ ಮುಂದೆ ಈ ಕುರಿತು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಬಿಜೆಪಿ ತಾಲೂಕಾಧ್ಯಕ್ಷ ಕೆ. ಮಲ್ಲಿಕಾರ್ಜುನ, ನಗರಸಭೆ ಮಾಜಿ ಸದಸ್ಯರಾದ ಮೋಹನ್ ರೆಡ್ಡಿ, ನಟರಾಜ, ವೈ ಡಿ ವೆಂಕಟೇಶ, ದೊಡ್ಡ ಹುಲಗಪ್ಪ, ಶಂಕ್ರಪ್ಪ, ಎಸ್. ಮುದುಕಪ್ಪ, ಶಿವಾಜಿ, ಅಂಗಯ್ಯ, ಚಾಗಿ ಸುಬ್ಬಯ್ಯ ಶೆಟ್ಟಿ, ಶೇಕ್ಷವಲಿ, ಬಿ ಎಂ ಸೂಗೂರು ರಾಜಶೇಖರ, ಇಬ್ರಾಹಿಂಪುರು ಈರಣ್ಣ ಗೌಡ, ಮೇಕೆಲಿ ವೀರೇಶ, ಮಹಾದೇವ, ಬೆಳಗಲ್ ಬಸವರಾಜ್, ಬಿ.ಈರಣ್ಣ ಬಿಜೆಪಿ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















